HEALTH TIPS

ಪಪ್ಪಾಯ ಕಾಯಿಯ ಸೇವನೆಯಿಂದಾಗುವ ಅದ್ಭುತ ಪ್ರಯೋಜನಗಳು

 ಪ್ಪಾಯ ಕಾಯಿಯ ಸೇವನೆಯಿಂದ ಮುಖ್ಯವಾಗಿ ಈ ಐದು ಪ್ರಯೋಜನಗಳನ್ನು ಪಡೆಯಬಹುದು ಇಲ್ಲಿದೆ ನೋಡಿ ಮಾಹಿತಿ. ಪಪ್ಪಾಯ ಅಥವಾ ಪರಂಗಿ ಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಹಣ್ಣು.

ಇದರಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ. ಪಪ್ಪಾಯ ಹಣ್ಣು ಹೇರಳವಾದ ವಿಟಮಿನ್‌ಗಳಿಂದ ಸಮೃದ್ಧವಾಗಿರುತ್ತದೆ.

ಕ್ಯಾನ್ಸರ್‌, ಮೂಳೆಗಳ ಬೆಳವಣಿಗೆಯಿಂದ ಹಿಡಿದು ಅಸ್ತಮಾವರೆಗೂ ಪರಿಹಾರ ನೀಡುತ್ತದೆ. ಅದೇ ರೀತಿ ಪಪ್ಪಾಯ ಕಾಯಿ ಕೂಡ ಆರೋಗ್ಯಕ್ಕೆ ಅಷ್ಟೇ ಪ್ರಯೋಜನಗಳನ್ನು ನೀಡುತ್ತದೆ. ಆದರೆ ನೆನಪಿಡಿ ಗರ್ಭಿಣಿಯರು ಯಾವುದೇ ಕಾರಣಕ್ಕೂ ಪಪ್ಪಾಯ ಕಾಯಿ ಅಥವಾ ಅದರ ಪದಾರ್ಥಗಳನ್ನು ಸೇವಿಸಬೇಡಿ. ಇದು ಗರ್ಭಪಾತಕ್ಕೆ ಕಾರಣವಾಗುತ್ತದೆ.

ಉಳಿದಂತೆ ಪಪ್ಪಾಯ ಕಾಯಿಯನ್ನು ಯಾರು ಬೇಕಾದರೂ ಸೇವಿಸಬಹುದು. ಪಪ್ಪಾಯ ಕಾಯಿಯಲ್ಲಿ ಪೊಟ್ಯಾಸಿಯಮ್, ಫೈಬರ್, ಮೆಗ್ನೀಸಿಯಮ್ ಮತ್ತು ಕನಿಷ್ಠ ಕ್ಯಾಲೋರಿಗಳ ಜೊತೆಗೆ ವಿಟಮಿನ್ ಸಿ, ಬಿ ಮತ್ತು ಇ ನಂತಹ ಪ್ರಮುಖ ಪೋಷಕಾಂಶಗಳು ಅಡಕವಾಗಿದೆ. ಇಲ್ಲಿದೆ ನೋಡಿ ಪಪ್ಪಾಯ ಕಾಯಿಯ ಅದ್ಭುತ ಆರೋಗ್ಯ ಪ್ರಯೋಜನಗಳು. ಪಪ್ಪಾಯ ಕಾಯಿ ದೇಹದಲ್ಲಿ ಜೀರ್ಣಶಕ್ತಿಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ ದೇಹವನ್ನು ಶುದ್ಧೀಕರಿಸಲು ನೆರವಾಗುತ್ತದೆ. ಇದು ಪಪೈನ್ ನಂತಹ ಕಿಣ್ವಗಳನ್ನು ಹೊಂದಿರುತ್ತದೆ, ಇದು ಜೀರ್ಣಕ್ರಿಯೆಗಾಗಿ ಗ್ಯಾಸ್ಟ್ರಿಕ್ ಆಮ್ಲಗಳ ಸ್ರವಿಸುವಿಕೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಅಲ್ಲದೆ, ಈ ಪೋಷಕಾಂಶವು ನಮ್ಮ ಕರುಳಿನ ಬ್ಯಾಕ್ಟೀರಿಯಾಕ್ಕೆ ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯನ್ನು ಟಾಕ್ಸಿನ್ ಮುಕ್ತವಾಗಿಡುತ್ತದೆ. ಪಪ್ಪಾಯಿಯ ಕಾಯಿಗಳು ಪ್ರೋಟೀನ್‌, ಫೈಟೊನ್ಯೂಟ್ರಿಯೆಂಟ್‌ , ಪಪೈನ್ ಮತ್ತು ಚೈಮೊಪಪೈನ್‌ನಂತಹ ಕಿಣ್ವಗಳನ್ನು ಹೊಂದಿರುತ್ತದೆ, ಇದು ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕಡಿಮೆ ಮಾಡಿ ದೇಹದ ತೂಕ ಇಳಿಕೆಗೆ ಸಹಕಾರಿಯಾಗಿದೆ. ಇದರ ಜೊತೆಗೆ ಹೊಸ ಜೀವಕೋಶಗಳ ಅಭಿವೃದ್ಧಿಗೆ, ಚರ್ಮದ ಸಮಸ್ಯೆಗಳು ಹಾಗೂ ಗಂಟುಗಳ ನೋವನ್ನು ಶಮನಗೊಳಿಸಲು ಸಹಕಾರಿಯಾಗಿದೆ. ಪಪ್ಪಾಯ ಕಾಯಿಯು ಹೇರಳವಾದ ವಿಟಮಿನ್‌ ಎ,ಬಿ,ಸಿ ಮತ್ತು ಇ ಅಂಶವನ್ನು ಹೊಂದಿದೆ. ಇವುಗಳು ಕಣ್ಣಿನ ಆರೋಗ್ಯ, ಚರ್ಮದ ಕಾಂತಿಯನ್ನು ಕಾಪಾಡಲು ಸಹಾಯ ಮಾಡುತ್ತವೆ. ಹೃದಯದ ಸಮಸ್ಯೆಯನ್ನು ತಡೆಗಟ್ಟುವುದರ ಜೊತೆಗೆ. ರೋಗ ನಿರೋಧಕ ಶಕ್ತಿಯನ್ನು ಬಲವಾಗಿಸಿ ಆಗಾಗ ಕಾಡುವ ಶೀತ, ಜ್ವರ, ಕೆಮ್ಮಿನಿಂದ ಮುಕ್ತಿ ನೀಡುತ್ತದೆ. ಆದ್ದರಿಂದ ಪಪ್ಪಾಯ ಕಾಯಿಯ ಬಳಕೆ ಮಾಡಿ. ಸಾಂಬಾರ್‌, ಪಲ್ಯದಂತಹ ಪದಾರ್ಥಗಳನ್ನು ಮಾಡಿ ಪಪ್ಪಾಯ ಕಾಯಿಯ ಸೇವನೆ ಮಾಡಬಹುದು. ಆಹಾರದಲ್ಲಿ ಬದಲಾವಣೆಯಾದರೆ ಕೆಲವೊಮ್ಮೆ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಪಪ್ಪಾಯಿಯ ಕಾಯಿಯಲ್ಲಿ ನಾರಿನಂಶವಿದ್ದು ಮಲಬದ್ಧತೆಯನ್ನು ತಡೆಯುತ್ತದೆ. ಪಪ್ಪಾಯಿಯು ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ ಏಕೆಂದರೆ ಇದು ಪರಾವಲಂಬಿ ಮತ್ತು ಅಮೀಬಿಕ್ ವಿರೋಧಿ ಸ್ವಭಾವವನ್ನು ಹೊಂದಿದೆ . ಇದರಿಂದಾಗಿ ಗ್ಯಾಸ್ಟ್ರಿಕ್‌ ಸಮಸ್ಯೆ ಕೂಡ ಕಾಡುವುದಿಲ್ಲ. ಪಪ್ಪಾಯ ಕಾಯಿಗಳು ಫೈಟೊಕೆಮಿಕಲ್ ಘಟಕಗಳು ಮತ್ತು ಇಮ್ಯುನೊಮಾಡ್ಯುಲೇಟರಿ ಗುಣಲಕ್ಷಣಗಳನ್ನು ಹೊಂದಿವೆ. ಆದ್ದರಿಂದ, ಹಸಿರು ಪಪ್ಪಾಯಿಯ ಸಾರಗಳು ಚರ್ಮದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಗಾಯವನ್ನು ಬೇಗನೆ ಗುಣಪಡಿಸಲು ಸಹಕಾರಿಯಾಗಿದ್ದು, ಗಾಯಕ್ಕೆ ಸೋಂಕು ತಗುಲದಂತೆ ತಡೆಯುತ್ತದೆ. ಹೀಗಾಗಿ ವಾರದಲ್ಲಿ ಒಮ್ಮೆಯಾದರೂ ಪಪ್ಪಾಯ ಕಾಯಿಯನ್ನು ಬಳಕೆ ಮಾಡಿ. ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries