HEALTH TIPS

ಸುಂಕ ಕಡಿತ, ಬಿಲ್ ಅರ್ಧದಷ್ಟು ಕಡಿಮೆ: ಮೀಟರ್ ರೀಡಿಂಗ್ ಗ್ರಾಕರೇ ಮಾಡುವ ವ್ಯವಸ್ಥೆ: ಸುಧಾರಣೆಯತ್ತ ಕೆಎಸ್‍ಇಬಿ

            ತಿರುವನಂತಪುರಂ: ಕೆಎಸ್‍ಇಬಿ ಎರಡು ತಿಂಗಳ ಬಿಲ್ಲಿಂಗ್ ನಿಂದ ಮಾಸಿಕ ಬಿಲ್ಲಿಂಗ್ ವ್ಯವಸ್ಥೆಗೆ ಬದಲಾಯಿಸಲು ಯೋಜಿಸಿದೆ.

          ಗ್ರಾಹಕರು ಶೀಘ್ರದಲ್ಲೇ ತಮ್ಮ ಮೀಟರ್ ರೀಡಿಂಗ್‍ಗಳನ್ನು ರೆಕಾರ್ಡ್ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ, ಸ್ಪಾಟ್ ಬಿಲ್ಲಿಂಗ್‍ಗಾಗಿ ಕ್ಯು.ಆರ್. ಕೋಡ್ ಸೌಲಭ್ಯವನ್ನು ಪರಿಚಯಿಸಬಹುದು.

             ಈ ಕ್ರಮವು ಕೇರಳದಾದ್ಯಂತ 1.40 ಕೋಟಿ ಗ್ರಾಹಕರಿಗೆ ಬಿಲ್ಲಿಂಗ್ ಪ್ರಕ್ರಿಯೆಯನ್ನು ಸರಳಗೊಳಿಸುವ ಯೋಜನೆಯ ಭಾಗವಾಗಿದೆ. ಮಾಸಿಕ ಬಿಲ್ಲಿಂಗ್ ಅನ್ನು ಕಳೆದ ಹಲವಾರು ವರ್ಷಗಳಿಂದ ಗ್ರಾಹಕರು ಮುಂದಿಡುವ ಅವಶ್ಯಕತೆಯಾಗಿದೆ. ಎರಡು ತಿಂಗಳಿಂದ ಒಂದು ತಿಂಗಳಿಗೆ ಬದಲಾಯಿಸುವಾಗ ಬಿಲ್ ಮೊತ್ತವನ್ನು ಹೊರೆಯಿಲ್ಲದೆ ಪಾವತಿಸಬಹುದು.

          200 ಯೂನಿಟ್‍ಗಿಂತ ಹೆಚ್ಚು ಬಳಕೆ ಮಾಡುವವರು ಪ್ರತಿ ಯೂನಿಟ್‍ಗೆ 8.20 ರೂ.ನಂತೆ ವಿದ್ಯುತ್ ದರವನ್ನು ಪಾವತಿಸುವುದು ಪ್ರಸ್ತುತದ ರೀತಿ. ಮಾಸಿಕ ಬಿಲ್ಲಿಂಗ್ ಅನ್ನು ಪರಿಚಯಿಸಿದಾಗ ಹೆಚ್ಚಿನ ಸುಂಕಗಳು ಮತ್ತು ಅತಿಯಾದ ಬಿಲ್‍ಗಳು ತಗ್ಗಲಿದೆ ಎಂಬುದು ಅಂದಾಜು. 

            ಮೀಟರ್ ರೀಡಿಂಗ್ ತೆಗೆದುಕೊಳ್ಳಲು ಒಂದು ಮನೆಗೆ ಕೆಎಸ್ ಇಬಿಗೆ ಸುಮಾರು 9 ರೂ.ವ್ಯಯವಾಗುತ್ತದೆ. ಮಾಸಿಕ ಬಿಲ್ಲಿಂಗ್‍ಗೆ ಬದಲಾಯಿಸಿದರೆ ಈ ಮೊತ್ತವು ದ್ವಿಗುಣಗೊಳ್ಳುತ್ತದೆ. ಸ್ಪಾಟ್ ಬಿಲ್ಲಿಂಗ್ ಬಂದರೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ಅಂತಹ ವೆಚ್ಚವನ್ನು ಕಡಿತಗೊಳಿಸಲು ಕೆಎಸ್‍ಇಬಿ ಗ್ರಾಹಕರಿಗೆ ಮೀಟರ್ ರೀಡಿಂಗ್ ಅನ್ನು ಸ್ವತಃ ನೋಡಿ ಪಾವತಿಸಲು ಯೋಚಿಸುತ್ತಿದೆ.

         ಆ ಸಂದರ್ಭದಲ್ಲಿ, ಸ್ಪಾಟ್ ಬಿಲ್ಲಿಂಗ್‍ಗಾಗಿ, ಕೆಎಸ್‍ಇಬಿ ಸಿಬ್ಬಂದಿ ಮನೆಗಳಿಗೆ ತಲುಪಿದಾಗ ಗ್ರಾಹಕರು ದಾಖಲಿಸಿದ ರೀಡಿಂಗ್ ಅನ್ನು ಮಾತ್ರ ಪರಿಶೀಲಿಸಬೇಕಾಗುತ್ತದೆ. ತಕ್ಷಣದ ಬಿಲ್ ಪಾವತಿಗೆ ಸ್ಪಾಟ್ ಬಿಲ್ ಜೊತೆಗೆ ಕ್ಯೂಆರ್ ಕೋಡ್ ಸೌಲಭ್ಯವೂ ಪರಿಗಣನೆಯಲ್ಲಿದೆ.

            ವಿವಿಧ ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು 3,400 ಕೋಟಿಗಳಷ್ಟು ವಿದ್ಯುತ್ ಶುಲ್ಕವನ್ನು ಬಾಕಿ ಉಳಿಸಿಕೊಂಡಿವೆ. ಮಾಸಿಕ ಬಿಲ್ಲಿಂಗ್‍ಗೆ ಬದಲಾಯಿಸುವ ಮೂಲಕ, ಪ್ರತಿ ತಿಂಗಳು ಸಮಯಕ್ಕೆ ಬಿಲ್‍ಗಳನ್ನು ಪಾವತಿಸಲು ಸಂಸ್ಥೆಗಳ ಕಡೆಯಿಂದ ಪ್ರಯತ್ನವಾಗಬಹುದು ಎಂದು ಕೆಎಸ್‍ಇಬಿ ನಿರೀಕ್ಷಿಸುತ್ತದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries