HEALTH TIPS

ಅನ್ವರ್ ವಿರುದ್ಧ ಬಿಗು ಕ್ರಮ ಕೈಗೊಂಡ ಸಿಪಿಎಂ: ಪಾರ್ಕ್‍ನಲ್ಲಿರುವ ತಡೆಗೋಡೆ ಕೆಡವಿ, ಮರು ಟೆಂಡರ್ ಕರೆಯಲು ನಿರ್ಧಾರ

ನಿಲಂಬೂರು: ಮಲಪ್ಪುರಂ ಜಿಲ್ಲೆಯ ಕಾಕಡಂಪೊಯಿಲ್ ನಲ್ಲಿ ಶಾಸಕ ಪಿ.ವಿ. ಅನ್ವರ್ ಒಡೆತನದ ಪಿವಿಆರ್ ನ್ಯಾಚುರಲ್ ಪಾರ್ಕ್‍ನಲ್ಲಿರುವ ಬ್ಯಾರಿಕೇಡ್‍ಗಳನ್ನು ಕೆಡವಲು ಸಿಪಿಎಂ ಆಡಳಿತವಿರುವ ಕೂಡರಂಜಿ ಪಂಚಾಯಿತಿ ಕ್ರಮ ಕೈಗೊಂಡಿದೆ.

ಪಂಚಾಯಿತಿ ತುರ್ತು ಸಭೆ ನಡೆಸಿ, ನದಿಯ ಹರಿವಿಗೆ ಅಡ್ಡಿಯಾಗಿರುವ ನಿರ್ಮಾಣಗಳನ್ನು ಕೆಡವಲು ಮತ್ತು ಮರು ಟೆಂಡರ್ ಕರೆಯಲು ನಿರ್ಧರಿಸಿದೆ. 

ಈ ಹಿಂದೆ ಬ್ಯಾರಿಕೇಡ್ ಕೆಡವಲು ಹೈಕೋರ್ಟ್ ಆದೇಶ ನೀಡಿದ್ದರೂ ಪಂಚಾಯ್ತಿ ಎಂಟು ತಿಂಗಳವರೆಗೆ ವಿಳಂಬ ಮಾಡಿತ್ತು. ಆದರೆ ಅನ್ವರ್ ಪಕ್ಷದಿಂದ ದೂರ ಸರಿದ ಬಳಿಕ ಪಂಚಾಯ್ತಿ ಕ್ರಮ ಕೈಗೊಂಡಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಿಪಿಎಂ ವಿರುದ್ಧ ನಿರಂತರವಾಗಿ ಹರಿಹಾಯ್ದ ನಂತರ ಶಾಸಕ ಅನ್ವರ್ ವಿರುದ್ಧ ಕ್ರಮಗಳನ್ನು ಪ್ರಾರಂಭಿಸಲಾಯಿತು. ನಿನ್ನೆ ಅನ್ವರ್ ವಿರುದ್ಧ ಅಕ್ರಮವಾಗಿ ಪೋನ್ ಕದ್ದಾಲಿಕೆ ಆರೋಪದಡಿ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಪಿವಿಆರ್ ನ್ಯಾಚುರೋ ಪಾರ್ಕ್‍ನಲ್ಲಿರುವ ಅಕ್ರಮ ತಡೆಗೋಡೆ ಕೆಡವುವ ಕ್ರಮವನ್ನು ಪಂಚಾಯಿತಿ ತೀವ್ರಗೊಳಿಸಿದೆ.

ಏತನ್ಮಧ್ಯೆ, ಅನ್ವರ್ ಇಂದು ಕೋಝಿಕ್ಕೋಡ್‍ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಾಮಿ ನಾಪತ್ತೆ ಪ್ರಕರಣ ಸ್ಪಷ್ಟೀಕರಣ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮುದಲ್ಕುಳಂ ಮೈದಾನದಲ್ಲಿ ಸಂಜೆ 6:30ಕ್ಕೆ ಕಾರ್ಯಕ್ರಮ ನಡೆಯಲಿದೆ. 

ಈ ವೇಳೆ ಪೋನ್ ಹ್ಯಾಕಿಂಗ್ ಪ್ರಕರಣದಲ್ಲಿ ಅನ್ವರ್ ಅವರನ್ನು ಪೋಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ವರದಿಯಾಗಿದೆ. ನೆಡುಂಕುನ್ನಂ ನಿವಾಸಿ ಥಾಮಸ್ ಪೆಲಿಯಾನಿಕಲ್ ನೀಡಿದ ದೂರಿನ ಆಧಾರದ ಮೇಲೆ ಕೊಟ್ಟಾಯಂ ಕರುಕಚಲ್ ಪೋಲೀಸರು ಈ ಕ್ರಮ ಕೈಗೊಂಡಿದ್ದಾರೆ. ಉನ್ನತ ಅಧಿಕಾರಿಗಳ ಪೋನ್ ಹ್ಯಾಕ್ ಮಾಡಿ ಸಮಾಜದಲ್ಲಿ ಪೈಪೋಟಿ ಏರ್ಪಟ್ಟಿದೆ ಎಂಬುದು ದೂರು. ಆದರೆ ತಾನು ಪೋನ್ ಹ್ಯಾಕ್ ಮಾಡಿಲ್ಲ, ಬಂದ ಪೋನ್ ಕರೆಯನ್ನು ರೆಕಾರ್ಡ್ ಮಾಡಿಕೊಂಡಿದ್ದೇನೆ ಎಂಬುದು ಅನ್ವರ್ ವಾದಿಸಿದ್ದಾರೆ. ಇದೇ ವೇಳೆ ಚಂಟಕುನ್ನಿ ಬಸ್ ನಿಲ್ದಾಣದ ಬಳಿ ನಿಲಂಬೂರಿನಲ್ಲಿ ಪಿ.ವಿ.ಅನ್ವರ್ ನಡೆಸಿದ ರಾಜಕೀಯ ಸ್ಪಷ್ಟನೆ ಸಭೆಯಲ್ಲಿ ಮುಖ್ಯಮಂತ್ರಿ ಹಾಗೂ ಸಿಪಿಎಂಗೆ ಸವಾಲೆಸೆದ ವೇಳೆ ಜನಸಾಗರವೇ ನೆರೆದಿತ್ತು. ಸಿಪಿಎಂ ವಿರುದ್ದ ಬಣದ ಮಾಜಿ ನಾಯಕ ಇಎ ಸುಕು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries