ಜೆರುಸಲೇಂ: ಲೆಬನಾನ್‌ನಲ್ಲಿ 21 ದಿನಗಳ ಕದನ ವಿರಾಮ ಘೋಷಣೆ ಮಾಡಬೇಕು ಎನ್ನುವ ಅಮೆರಿಕ ಹಾಗೂ ಫ್ರಾನ್ಸ್‌ನ ಪ್ರಸ್ತಾಪವನ್ನು ತಿರಸ್ಕರಿಸಿದ್ದಾಗಿ ಇಸ್ರೇಲ್ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ತಿರಸ್ಕರಿಸಿದ್ದಾರೆ.
ಜೆರುಸಲೇಂ: ಲೆಬನಾನ್‌ನಲ್ಲಿ 21 ದಿನಗಳ ಕದನ ವಿರಾಮ ಘೋಷಣೆ ಮಾಡಬೇಕು ಎನ್ನುವ ಅಮೆರಿಕ ಹಾಗೂ ಫ್ರಾನ್ಸ್‌ನ ಪ್ರಸ್ತಾಪವನ್ನು ತಿರಸ್ಕರಿಸಿದ್ದಾಗಿ ಇಸ್ರೇಲ್ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ತಿರಸ್ಕರಿಸಿದ್ದಾರೆ.
ಈ ಪ್ರಸ್ತಾಪಕ್ಕೆ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, ಕಾರ್ಯಾಚರಣೆ ಮುಂದುವರಿಸಬೇಕು ಎಂದು ಸೇನೆಗೆ ಸೂಚನೆ ನೀಡಿದ್ದಾರೆ.
'ಉತ್ತರದಲ್ಲಿ ಯಾವುದೇ ಕದನ ವಿರಾಮ ಇಲ್ಲ. ಜಯಗಳಿಸುವ ಹಾಗೂ ಅಲ್ಲಿನ ಜನ ಸುರಕ್ಷಿತವಾಗಿ ಮನೆಗೆ ಮರಳುವವರೆಗೂ ಹಿಜ್ಬುಲ್ಲಾ ಉಗ್ರವಾದಿ ಸಂಘಟನೆ ವಿರುದ್ಧ ನಮ್ಮ ಹೋರಾಟ ನಿಲ್ಲದು' ಎಂದು ಕಾಟ್ಜ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿರುವ ನೇತನ್ಯಾಹು ಅವರ ಕಚೇರಿ, 'ಪೂರ್ವ ಯೋಜನೆಯಂತೆ ಪೂರ್ಣ ಸಾಮರ್ಥ್ಯದೊಂದಿಗೆ ಹೋರಾಟ ಮಾಡಲು ಸೇನೆಗೆ ನಿರ್ದೇಶಿಸಲಾಗಿದೆ. ಅಮೆರಿಕ ಹಾಗೂ ಫ್ರೆಂಚ್ ಪ್ರಸ್ತಾಪಕ್ಕೆ ಪ್ರಧಾನಮಂತ್ರಿಯವರು ಉತ್ತರ ನೀಡಿಲ್ಲ' ಎಂದು ಹೇಳಿದೆ.
ಈ ಪ್ರಕಟಣೆ ಹೊರಬಿದ್ದ ಕೆಲವೇ ನಿಮಿಷಗಳಲ್ಲಿ, ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ನೆಲೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಪಡೆಗಳು ಹೊಸದಾಗಿ ದಾಳಿ ನಡೆಸಿವೆ.