HEALTH TIPS

ನವ ಭರವಸೆಗಳೊಂದಿಗೆ ಶಾಲೆ ಮತ್ತು ಸ್ನೇಹಿತರು: ಮುಂಡಕೈ-ಚುರಲ್ಮಲಾ ಶಾಲೆಗಳಲ್ಲಿ ಮರು ಪ್ರವೇಶೋತ್ಸವ

ಮೆಪ್ಪಾಡಿ: ವ್ಯಾಪಕ ಭೂಕುಸಿತ ಸಂಭವಿಸಿದ ವಯನಾಡ್ ನ ಚುರಲ್‍ಮಲಾ ಮತ್ತು ಮುಂಡಕೈ ಶಾಲೆಗಳಲ್ಲಿ ನಿನ್ನೆ ಪ್ರವೇಶೋತ್ಸವದೊಂದಿಗೆ ತರಗತಿಗಳು ಮತ್ತೆ ಆರಂಭಗೊಂಡವು. ವೆಳ್ಳರ್ಮಲಾ ಶಾಲೆಯ ವಿದ್ಯಾರ್ಥಿಗಳ ಹೆಚ್ಚಿನ ಅಧ್ಯಯನವು ಜಿವಿಎಚ್‍ಎಸ್‍ಎಸ್ ಮೆಪ್ಪಾಡಿಯಲ್ಲಿ ಮತ್ತು ಮುಂಡಕೈ ಜಿಎಲ್‍ಪಿಎಸ್‍ನ ಮಕ್ಕಳ ಅಧ್ಯಯನವು ಮೆಪ್ಪಾಡಿಯ ಎಪಿಜೆ ಸಭಾಂಗಣದಲ್ಲಿ ನಡೆಯಲಿದೆ.

ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಪ್ರವೇಶ ಉತ್ಸವವನ್ನು ಉದ್ಘಾಟಿಸಿದರು. ಹೊಸ ಭರವಸೆಯೊಂದಿಗೆ ಆಗಮಿಸಿದ ವೆಳ್ಳರ್ಮಲ ಮತ್ತು ಮುಂಡಕೈ ಶಾಲೆಗಳ ಮಕ್ಕಳಿಗೆ ಶಿಕ್ಷಣ ಸಚಿವರು ಸಿಹಿ ತಿಂಡಿ ನೀಡಿ ಸ್ವಾಗತಿಸಿದರು. ಕ್ಯಾಲಿಕಟ್ ಪ್ರಾವಿಡೆನ್ಸ್ ಶಾಲೆಯ ತಂಡವು ಮಕ್ಕಳನ್ನು ಸ್ವಾಗತಿಸಲು ಬ್ಯಾಂಡ್ ಮೇಳವನ್ನು ಸಹ ಆಯೋಜಿಸಿತ್ತು. ಮಕ್ಕಳನ್ನು ಸಾಗಿಸಲು ಮೂರು ಕೆಎಸ್‍ಆರ್‍ಟಿಸಿ ಬಸ್‍ಗಳು ನೆರವು ನೀಡಿತ್ತು. ತಿಂಗಳಿಂದ ಗೆಳೆಯರಿಂದ ದೂರವಾಗಿದ್ದ ಮಕ್ಕಳು ಸಂತಸ ಹಂಚಿಕೊಳ್ಳುತ್ತಿರುವುದನ್ನು ಕಂಡು ಶಿಕ್ಷಕರು ನಿರಾಳರಾದರು.

ಸ್ವಾಗತ ಸಮಾರಂಭದಲ್ಲಿ ಪೋಲೀಸರು ಹಾಗೂ ಇತರೆ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಉದ್ಘಾಟನೆಯ ನಂತರ ವಿವಿಧ ಕಲಾ ಕಾರ್ಯಕ್ರಮಗಳು ನಡೆದವು. ಮರು ಪ್ರವೇಶ ಸಮಾರಂಭದಲ್ಲಿ 607 ಮಕ್ಕಳು ಭಾಗವಹಿಸಿದ್ದರು. ವೆಳ್ಳಾರ್ಮಲ ಶಾಲೆಯ 546 ವಿದ್ಯಾರ್ಥಿಗಳು ಮತ್ತು ಮುಂಡಕೈ ಶಾಲೆಯ 61 ವಿದ್ಯಾರ್ಥಿಗಳು ಮೆಪ್ಪಾಡಿ ಶಾಲೆ ಮತ್ತು ಎಪಿಜೆ ಸಭಾಂಗಣದಲ್ಲಿ ವ್ಯಾಸಂಗ ಮುಂದುವರಿಸಲಿದ್ದಾರೆ. ಅನೇಕ ಮಕ್ಕಳು ಇನ್ನೂ ವಿಪತ್ತಿನ ಆಘಾತಕಾರಿ ನೆನಪುಗಳನ್ನು ಹೊಂದಿದ್ದಾರೆ. ಆದ್ದರಿಂದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ತರಗತಿಗಳನ್ನು ನೀಡಲಾಗುವುದು ಎಂದು ಸಚಿವ ವಿ.ಶಿವನಕುಟ್ಟಿ ತಿಳಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries