ಉಪ್ಪಳ: 2024-25ನೇ ಶೈಕ್ಷಣಿಕ ವರ್ಷದ ಮಂಜೇಶ್ವರ ಉಪಜಿಲ್ಲಾ ಕ್ರೀಡಾಕೂಟದ ಸಂಘಟನಾ ಸಮಿತಿ ರೂಪೀಕರಣ ಸಭೆ ಕುರ್ಚಿಪಳ್ಳ ಜಿ.ಎಚ್.ಯು.ಪಿ. ಶಾಲೆಯಲ್ಲಿ ನಡೆಯಿತು.
ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರುಬೀನ ನೌಫಲ್ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತಿ ಸದಸ್ಯಗೋಲ್ಡನ್ ಅಬ್ದುಲ್ ರಹ್ಮಾನ್, ಬ್ಲಾಕ್ ಪಂಚಾಯತಿ ಉಪಾಧ್ಯಕ್ಷ ಹನೀಫ್ ಪಿ.ಕೆ. ಮುಖ್ಯ ಅತಿಥಿಗಳಾಗಿದ್ದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ರಾಜಗೋಪಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಹಿರಿಯ ಶಿಕ್ಷಕಿ ತಿರುಮಲೇಶ್ವರಿ ಸಂಘಾಟಕ ಸಮಿತಿಯ ಪ್ಯಾನಲ್ ಮಂಡಿಸಿದರು.
ಮುಖ್ಯ ಶಿಕ್ಷಕ ಉಮೇಶ್ ಬಜೆಟ್ ಮಂಡಿಸಿದರು. ವಾರ್ಡ್ ಸದಸ್ಯ ಮೊಹಮ್ಮದ್ ರಫೀಕ್, ಸಿ.ಡಿ.ಎಸ್. ಅಧ್ಯಕ್ಷೆ ಸುಶೀಲ, ಎಚ್.ಎಂ. ಫೆÇೀರಂ ಕನ್ವೀನರ್ ಶ್ಯಾಮ್ ಭಟ್, ಬ್ಲಾಕ್ ಸದಸ್ಯ ಅಶೋಕ್ ಮೊದಲಾದವರು ಶುಭ ಹಾರೈಸಿದರು. ಪಿಟಿಎ ಅಧ್ಯಕ್ಷ ಇಬ್ರಾಹಿಂ ಮೋಮಿನ್, ಪೈವಳಿಕೆ ನಗರ ಶಾಲೆಯ ಪ್ರಾಂಶುಪಾಲ ರಘುರಾಮ ಆಳ್ವ, ಪಿಟಿಎ ಉಪಾಧ್ಯಕ್ಷ ಸತೀಶ್, ಎಂಪಿಟಿಎ ಉಪಾಧ್ಯಕ್ಷೆ ಫಾತಿಮತ್ ಜೊಹ್ರಾ, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಕೈರುನ್ನಿಸ ಉಮ್ಮರ್, ವಿವಿಧ ಶಾಲಾ ಮುಖ್ಯ ಶಿಕ್ಷಕರು, ಸಂಘಟನಾ ನೇತಾರರು ಮತ್ತು ರಾಜಕೀಯ ನೇತಾರರು ಉಪಸ್ಥಿತರಿದ್ದರು. ತಾಹಿರ ಟೀಚರ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ಮಖ್ಯ ಶಿಕ್ಷಕ ಉಮೇಶ್ ಸ್ವಾಗತಿಸಿ, ಧÀನ್ಯ ಟೀಚರ್ ವಂದಿಸಿದರು.