ಪೆರ್ಲ: ಪೆರ್ಲದ ಎಸ್ ಎನ್ ಎ ಎಲ್ ಪಿ ಶಾಲೆಯ ಒಲಿಂಪಿಕ್ 2024 ಮಂಗಳವಾರ ಆರಂಭಗೊಂಡಿತು.
ರಾಷ್ಟ್ರೀಯ ವಾಲಿಬಾಲ್ ಆಟಗಾರ ಗಣೇಶ್ ರೈ ಶಾಲಾ ಒಲಿಂಪಿಕ್ಸ್ ಉದ್ಘಾಟಿಸಿ ಆಟಗಳು ಮನಸ್ಸನ್ನು ಆನಂದಗೊಳಿಸುವುದರೊಂದಿಗೆ ನಮ್ಮನ್ನು ಸಕಾರಾತ್ಮಕ ಚಿಂತನೆಗಳಿಗೆ ಪ್ರೇರೆಪಿಸುತ್ತದೆ. ಆದ್ದರಿಂದ ಶಾಲೆಯಲ್ಲಿ ಇಂತಹ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ ಪ್ರಾಥಮಿಕ ತರಗತಿಗಳಲ್ಲೇ ಸಿದ್ದಗೊಳಿಸುವುದರಿಂದ ಆತ್ಮಸ್ಥೆರ್ಯ ಹುಟ್ಟಿಕೊಳ್ಳುತ್ತದೆ ಎಂದು ತಿಳಿಸಿದರು.
ಶಾಲಾ ಸ್ಪೋಟ್ಸ್ ಕೌನ್ಸಿಲ್ ಅಧ್ಯಕ್ಷ ಹಮೀದ್ ಕುರೆಡ್ಕ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸತ್ಯನಾರಾಯಣ ವಿದ್ಯಾಸಂಸ್ಥೆಗಳ ಉಪಾಧ್ಯಕ್ಷ ಸದಾಶಿವ ಭಟ್ ಹರಿನಿಲಯ, ನಿವೃತ್ತ ಶಿಕ್ಷಕಿ ಸುಶೀಲಾ ಟೀಚರ್, ಜನಾರ್ಧನ ಸೇರಾಜೆ, ಪ್ರೌಢ ಶಾಲಾ ಪಿಟಿಎ ಅಧ್ಯಕ್ಷ ನಾರಾಯಣ ನಾಯಕ್ ನಲ್ಕ ಶುಭಾಶಂಸನೆಗೈದರು. ಪ್ರೌಢ ಶಾಲಾ ದೈಹಿಕ ಶಿಕ್ಷಕ ಬಾಲಕೃಷ್ಣ ಮಾಸ್ತರ್ ಇವರನ್ನು ಈ ಸಂದರ್ಭ ಅಭಿನಂದಿಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ರಾಜೇಶ್ ಬಜಕೂಡ್ಲು, ಗಣರಾಜ್ ಪಳ್ಳತ್ತಡ್ಕ, ಚಂದ್ರ ಪೆರ್ಲ ರಝಾಕ್, ಮಂಜು ಪೆರ್ಲ, ಮುಂತಾದವರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಉದಯ ಸಾರಂಗ ಸ್ವಾಗತಿಸಿ, ಸಂಧ್ಯಾ ಟೀಚರ್ ವಂದಿಸಿದರು. ಕಲಂದರ್ ಬೀಬಿ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಆಕರ್ಷಕ ಮೆರವಣಿಗೆಯ ಪದಸಂಚಲನದೊಂದಿಗೆ ಶಾಲಾ ಒಲಿಂಪಿಕ್ ಆರಂಭಗೊಂಡಿತು.