ತಿರುವನಂತಪುರಂ: ಕೇರಳ ಲಾಟರಿಯ ಮಾನ್ಸೂನ್ ಬಂಪರ್ ನ ನಕಲಿ ಟಿಕೆಟ್ ನೊಂದಿಗೆ ಪ್ರಥಮ ಬಹುಮಾನ ಪಡೆದಿರುವುದಾಗಿ ಲಾಟರಿ ನಿರ್ದೇಶನಾಲಯಕ್ಕೆ ತಮಿಳುನಾಡಿನ ತಿರುನಲ್ವೇಲಿ ಮೈಯಮ್ಮರುಕುರಿಯ ವ್ಯಕ್ತಿಯೊಬ್ಬರು ಬಂದಿದ್ದು, ಭಾರೀ ವಂಚನೆ ಬೆಳಕಿಗೆ ಬಂದಿದೆ.
ಲಾಟರಿ ನಿರ್ದೇಶಕರ ಸಹಿ, ಲಾಟರಿಯ ಕ್ಯೂಆರ್ ಕೋಡ್ ಮತ್ತಿತರ ಭದ್ರತಾ ವ್ಯವಸ್ಥೆಗಳನ್ನು ನಕಲಿ ಮಾಡಿ ಟಿಕೆಟ್ ತಯಾರಿಸಲಾಗಿದೆ.
ವಿವರವಾದ ಪರಿಶೀಲನೆಯ ನಂತರ, ಟಿಕೆಟ್ ನಕಲಿ ಎಂದು ಅಧಿಕಾರಿಗಳು ಮನವರಿಕೆ ಮಾಡಿಕೊಂಡು ತಿರುವನಂತಪುರಂ ಮ್ಯೂಸಿಯಂ ಠಾಣಾ ಪೋಲೀಸರಿಗೆ ಮಾಹಿತಿ ನೀಡಿದರು. ನಂತರ ಪೋಲೀಸರು ಆತನನ್ನು ವಶಕ್ಕೆ ತೆಗೆದುಕೊಂಡರು.
ಎಂಡಿ 769524 ಸಂಖ್ಯೆಗೆ ಪ್ರಥಮ ಬಹುಮಾನ ಲಭಿಸಿದೆ. ಬಹುಮಾನದ ಟಿಕೆಟ್ ಅನ್ನು ಮುವಾಟ್ಟುಪುಳದಲ್ಲಿ ಮಾರಾಟ ಮಾಡಲಾಗಿತ್ತು. ಮಾನ್ಸೂನ್ ಬಂಪರ್ ಮೊದಲ ಬಹುಮಾನ 10 ಕೋಟಿ. ಆದರೆ ಅದೃಷ್ಟಶಾಲಿ ವಿಜೇತರು ಯಾರೆಮಬುದು ಇನ್ನೂ ತಿಳಿದುಬಂದಿಲ್ಲ.