HEALTH TIPS

ಕಾರ್ಗಿಲ್ ಯುದ್ಧದಲ್ಲಿ ತನ್ನ ಪಾತ್ರವನ್ನು ಕೊನೆಗೂ ಒಪ್ಪಿಕೊಂಡ ಪಾಕ್ ಸೇನೆ

         ಸ್ಲಾಮಾಬಾದ್: 1999ರಲ್ಲಿ ಭಾರತದ ವಿರುದ್ಧ ನಡೆದ ಕಾರ್ಗಿಲ್ ಯುದ್ಧದಲ್ಲಿ ತನ್ನ ಪಾತ್ರದ ಕುರಿತು ಕೊನೆಗೂ ಪಾಕಿಸ್ತಾನದ ಸೇನೆ ಒಪ್ಪಿಕೊಂಡಿದೆ.

         ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್, ಕಾರ್ಗಿಲ್ ಯುದ್ಧದಲ್ಲಿ ಸೇನೆಯ ಪಾಲುದಾರಿಕೆ ಕುರಿತು 25 ವರ್ಷಗಳ ಬಳಿಕ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.

ಶುಕ್ರವಾರ ರಾವಲ್ಪಿಂಡಿಯಲ್ಲಿ ನಡೆದ ರಕ್ಷಣಾ ಮತ್ತು ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುನೀರ್, ಕಾರ್ಗಿಲ್ ಸೇರಿದಂತೆ ಭಾರತದೊಂದಿಗಿನ ಹಲವು ಯುದ್ಧಗಳಲ್ಲಿ ತಾಯ್ನಾಡನ್ನು ರಕ್ಷಿಸುವಲ್ಲಿ ಸೇನೆಯ ಪಾತ್ರವನ್ನು ಎತ್ತಿ ಹಿಡಿದರು.

           'ಪಾಕಿಸ್ತಾನವು ಧೈರ್ಯಶಾಲಿ ರಾಷ್ಟ್ರವಾಗಿದ್ದು, ಸ್ವಾತಂತ್ರ್ಯದ ಪ್ರಾಮುಖ್ಯತೆ ಹಾಗೂ ಯಾವುದೇ ಬೆಲೆ ತೆತ್ತಾದರೂ ಅದನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ಗೊತ್ತಿದೆ. ಪಾಕಿಸ್ತಾನ-ಭಾರತ ನಡುವಣ 1948, 1965, 1971 ಮತ್ತು ಕಾರ್ಗಿಲ್ ಅಥವಾ ಸಿಯಾಚಿನ್ ಯುದ್ಧಗಳೇ ಆಗಿರಲಿ, ಸಾವಿರಾರು ಹುತಾತ್ಮರು ದೇಶದ ಭದ್ರತೆ ಹಾಗೂ ಗೌರವಕ್ಕಾಗಿ ಬಲಿದಾನ ಮಾಡಿದ್ದಾರೆ' ಎಂದು ಹೇಳಿದ್ದಾರೆ.

ಕಾರ್ಗಿಲ್ ಯುದ್ಧದ ಸಮಯದಲ್ಲಿ ಸೇನಾ ಮುಖ್ಯಸ್ಥರಾಗಿದ್ದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು 2006ರಲ್ಲಿ ಬರೆದ 'ಇನ್ ದಿ ಲೈನ್ ಆಫ್ ಫೈರ್' ಪುಸ್ತಕದಲ್ಲೂ ಪಾಕ್ ಸೇನೆಯ ಪಾತ್ರವನ್ನು ಒಪ್ಪಿಕೊಂಡಿದ್ದರು.

ಕಾರ್ಗಿಲ್ ವಿಜಯ ದಿವಸ...

           ಪಾಕಿಸ್ತಾನದ ಸೇನೆಗೆ ತಕ್ಕ ಪಾಠ ಕಲಿಸಿದ್ದ ಭಾರತ ಯುದ್ಧದಲ್ಲಿ ವಿಜಯೋತ್ಸವ ಆಚರಿಸಿತ್ತು. 1999ರ ಯುದ್ಧದಲ್ಲಿ ಭಾರತದ ವೀರ ಯೋಧರ ಸಾಹಸ ಹಾಗೂ ಬಲಿದಾನವನ್ನು ನೆನೆಯುವುದರೊಂದಿಗೆ ಗೆಲುವಿನ ಸಂಭ್ರಮಿಸುವ ಸಲುವಾಗಿ ಪ್ರತಿ ವರ್ಷ ಜುಲೈ 26ರಂದು 'ಕಾರ್ಗಿಲ್ ವಿಜಯ ದಿವಸ' ಆಚರಿಸಲಾಗುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries