HEALTH TIPS

'ಗೋವಾದಲ್ಲಿ ಕ್ರೈಸ್ತ ಜನಸಂಖ್ಯೆ ಕುಸಿತ, ಮುಸ್ಲಿಂ ಜನಸಂಖ್ಯೆ ಏರಿಕೆ'

 ತಿರುವನಂತಪುರ: ಗೋವಾದಲ್ಲಿ ಕ್ರೈಸ್ತರ ಸಂಖ್ಯೆ ಕುಸಿಯುತ್ತಿದ್ದು, ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ, ಈ ಬಗ್ಗೆ ಕಾರಣ ತಿಳಿಯಲು ಒಂದು ಸಕಾರಾತ್ಮಕ ತನಿಖೆ ಅವಶ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ಕೊಚ್ಚಿಯ ಚರ್ಚ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಶ್ರೀಧರನ್ ಪಿಳ್ಳೈ, ಬಿಷಪ್‌ಗಳು ಕ್ರೈಸ್ತರ ಜನಸಂಖ್ಯೆ ಕ್ಷೀಣಿಸುತ್ತಿರುವ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

'ಗೋವಾದಲ್ಲಿ ಕ್ರೈಸ್ತರ ಜನಸಂಖ್ಯೆಯು ಶೇಕಡಾ 36ರಿಂದ 25ಕ್ಕೆ ಇಳಿದಿದೆ. ಆದರೆ, ಮುಸ್ಲಿಂ ಜನಸಂಖ್ಯೆಯು ಶೇ 3ರಿಂದ ಶೇ 12ಕ್ಕೆ ಏರಿಕೆಯಾಗಿದೆ. ಬಿಷಪ್‌ಗಳು ಈ ಬಗ್ಗೆ ಸಕಾರಾತ್ಮಕವಾಗಿ ತನಿಖೆ ನಡೆಸಬಹುದು' ಎಂದು ಪಿಳ್ಳೈ ಹೇಳಿದ್ದಾರೆ.

ನಂತರ ಮತ್ತೊಂದು ಸಮಾರಂಭದಲ್ಲಿ ಮಾತನಾಡಿರುವ ಪಿಳ್ಳೈ, ತಮ್ಮ ಹೇಳಿಕೆಯನ್ನು ಯಾವುದೇ ಧರ್ಮವನ್ನು ಗುರಿಯಾಗಿಸಿಕೊಂಡು ತಪ್ಪಾಗಿ ಅರ್ಥೈಸಬಾರದು ಎಂದು ಹೇಳಿದರು.

ಕ್ರೈಸ್ತರ ಜನಸಂಖ್ಯೆಯ ಕುಸಿತದ ಕಾರಣಗಳ ಬಗ್ಗೆ ತಿಳಿಯಲು ಸಕಾರಾತ್ಮಕವಾದ ತನಿಖೆ ಆಗಲಿ ಎನ್ನುವುದು ತಮ್ಮ ಬಯಕೆ. ಏಕೆಂದರೆ, ಈ ರೀತಿ ಒಂದು ಧರ್ಮದ ಜನಸಂಖ್ಯೆ ಕುಸಿಯಲು ಸುಶಿಕ್ಷಿತ ಜನರ ವಲಸೆ ಕೂಡ ಕಾರಣವಿರಬಹುದು ಎಂದೂ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries