ಕಾಸರಗೋಡು: ತಮಿಳ್ನಾಡಿನ ಕೊಯಂಬತ್ತೂರಿನಲ್ಲಿ ನಡೆದ ವಾಹನ ಅಪಘಾತದಲ್ಲಿ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಪುತ್ತಿಗೆ ಸನಿಹದ ಕಟ್ಟತ್ತಡ್ಕ ನಿವಾಸಿ, ವೈದ್ಯಕೀಯ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ಕಟ್ಟತ್ತಡ್ಕ ಎ.ಕೆ.ಜಿ ನಗರದಲ್ಲಿ ವಾಸಿಸುವ, ಮೊಗ್ರಾಲ್‍ಕೊಪ್ಪಳ ನಿವಾಸಿ ಅಹಮ್ಮದ್ ಎಂಬವರ ಪುತ್ರ, ಎಂ.ಕೆ ಮಹಮ್ಮದ್ ರಾಶಿದ್921)ಮೃತಪಟ್ಟವರು. ಮಹಮ್ಮದ್ ರಾಶಿದ್ ಕೊಯಂಬತ್ತೂರಿನ ವೈದ್ಯಕೀಯ ಕಾಲೇಜೊಂದರಲ್ಲಿ ಎಂಬಿಬಿಎಸ್ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದರು. ಬುಧವಾರ ರಾತ್ರಿ ಬೈಕಲ್ಲಿ ತೆರಳಿದ್ದ ಮಹಮ್ಮದ್ ರಾಶಿದ್, ರಸ್ತೆಬದಿ ಬೈಕ್ ನಿಲ್ಲಿಸಿ ಹೋಟೆಲ್ ಒಂದರಿಂದ ಆಹಾರ ಪಡೆದು, ರಸ್ತೆ ಅಡ್ಡದಾಟುತ್ತಿದ್ದಂತೆ ಟಿಪ್ಪರ್ ಲಾರಿ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಒಂದು ವಆರದ ಹಿಂದೆಯಷ್ಟೆ ಊರಿಗೆ ಆಗಮಿಸಿ ವಾಪಸಾಗಿದ್ದರು.