ಕಾಸರಗೋಡು: ಅರಣ್ಯ ಮತ್ತು ವನ್ಯ ಜೀವಿ ಇಲಾಖೆ, ಸಾಮಾಜಿಕ ಅರಣ್ಯೀಕರಣ ವಿಭಾಗ, ಬೀಚ್‍ಫ್ರಂಟ್ಸ್ ಗ್ರಂಥಾಲಯ ವತಿಯಿಂದ ಜಂಟಿಯಾಗಿ 'ಸ್ವಚ್ಛತಾ ಹೀ ಸೇವಾ 2024' ಅಂಗವಾಗಿ, ಸಮುದ್ರ ತೀರದ ಸ್ವಚ್ಛತೆ ಮತ್ತು ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಯಿತು.
ಮಾವಿಲಕಡಪ್ಪುರ ವೆಳುತ್ತಪೊಯ್ಯ ವಠಾರದಲ್ಲಿ ನಡೆದ ಸಮಾರಂಭದಲ್ಲಿ ವಲಿಯ ಪರಂಬ ಗ್ರಾಮ ಪಂಚಾಯಿತಿ ಸದಸ್ಯ ವಿ.ಮಧು ಉದ್ಘಾಟಿಸಿದರು. ಕಾಸರಗೋಡು ವಲಯ ಅರಣ್ಯಾಧಿಕಾರಿ ಕೆ ಗಿರೀಶ್‍ಅಧ್ಯಕ್ಷತೆ ವಹಿಸಿದ್ದರು.
ವಲಿಯ ಪರಂಬ ಗ್ರಾ.ಪಂ.ಮಾಜಿ ಅಧ್ಯಕ್ಷ ವಿ.ವಿ.ಉತ್ತಮನ್, ವಲಯ ಅರಣ್ಯಾಧಿಕಾರಿಗಳಾದ ಕೆ.ಆರ್.ವಿಜಯನಾಥ್, ಎಂ. ಸುಂದರನ್, ಎಂ ಬಿಜು ಮತ್ತು ಎನ್ ನಾರಾಯಣ ನಾಯ್ಕ್ ಉಪಸ್ಥಿತರಿದ್ದರು. ವಲಿಯಪರಂಬ ಗ್ರಾಮದಲ್ಲಿ ಸಮುದ್ರ ತೀರದ ಸ್ವಚ್ಛತೆಯ ಮೂಲಕ ಸಂಗ್ರಹವಾದ ಕಸವನ್ನು ವಿಂಗಡಿಸಿ, ಗ್ರಾಮ ಪಂಚಾಯತಿಯ ಹಸಿರು ಕ್ರಿಯಾ ಸೇನೆಗೆ ಹಸ್ತಾಂತರಿಸಲಾಯಿತು. ಹಸಿರು ಕ್ರಿಯಾ ಸೇನೆಯ ಸದಸ್ಯರಾದ ಶೈಜಾ ಕೆ, ಸಿ.ಕೆ.ಸುಮತಿ, ಗ್ರಂಥಾಲಯ ವನಿತಾ ವಿಭಾಗದವರು ಉಪಸ್ಥಿತರಿದ್ದರು. ಬೀಟ್ ಅರಣ್ಯಾಧಿಕಾರಿ ರಂಜಿತ್ ಬಿ, ಲಿಜೋ ಸೆಬಾಸ್ಟಿಯನ್ ಗ್ರಂಥಾಲಯದ ಅಧ್ಯಕ್ಷ ಕುಞÂಕೃಷ್ಣನ್ ನೇತೃತ್ವ ವಹಿಸಿದ್ದರು.ಗ್ರಂಥಾಲಯ ಕಾರ್ಯದರ್ಶಿ ಕೆ.ವಿ.ವತ್ಸನ್ ಸ್ವಾಗತಿಸಿದರು. ಉಪ ವಲಯ ಅರಣ್ಯಾಧಿಕಾರಿ ಎನ್.ವಿ.ಸತ್ಯನ್ ವಂದಿಸಿದರು.