HEALTH TIPS

ಕೊಲ್ಕತ್ತಾದಲ್ಲಿ ಟ್ರ್ಯಾಮ್ ಸೇವೆ ಸ್ಥಗಿತಗೊಳಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧಾರ

ಕೋಲ್ಕತ್ತಾ: ಕೋಲ್ಕತ್ತಾದಲ್ಲಿ 150 ವರ್ಷಗಳಷ್ಟು ಹಳೆಯದಾದ ಟ್ರ್ಯಾಮ್ ಸೇವೆಯನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ.

ಮೈದಾನ್ ದಿಂದ ಎಸ್ಪ್ಲೇನೇಡ್ ವರೆಗಿನ ಒಂದು ಸಣ್ಣ ಮಾರ್ಗವನ್ನು ಹೊರತುಪಡಿಸಿ, ಇತರ ಎಲ್ಲಾ ಕಡೆ ಟ್ರ್ಯಾಮ್ ಸೇವೆ ಸ್ಥಗಿತಗೊಳಿಸಲಾಗುವುದು ಎಂದು ಪಶ್ಚಿಮ ಬಂಗಾಳ ಸಾರಿಗೆ ಸಚಿವ ಸ್ನೇಹಸಿಸ್ ಚಕ್ರವರ್ತಿ ಅವರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿ ಟ್ರ್ಯಾಮ್ ಪ್ರೇಮಿಗಳು ಬೀದಿಗಿಳಿದು ಪ್ರತಿಭಟಿಸಲು ನಿರ್ಧರಿಸಿದ್ದಾರೆ.

ಟ್ರ್ಯಾಮ್‌ಗಳು ಕಾರ್ಯನಿರ್ವಹಿಸುತ್ತಿರುವ ದೇಶದ ಏಕೈಕ ನಗರ ಕೋಲ್ಕತ್ತಾ ಆಗಿದೆ. ಆದರೆ ನಿಧಾನವಾಗಿ ಚಲಿಸುವ ಟ್ರಾಮ್‌ಗಳು, ಪೀಕ್ ಅವರ್‌ಗಳಲ್ಲಿ ರಸ್ತೆಗಳ ಉದ್ದಕ್ಕೂ ಟ್ರಾಫಿಕ್ ಜಾಮ್‌ ಗೆ ಕಾರಣವಾಗುತ್ತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರಯಾಣಿಕರಿಗೆ ವೇಗದ ಸಾರಿಗೆ ವಿಧಾನಗಳ ಅಗತ್ಯವಿರುವುದರಿಂದ ಟ್ರ್ಯಾಮ್ ಸೇವೆ ಮುಂದುವರೆಸಲು ಸಾಧ್ಯವಿಲ್ಲ ಎಂದು ಚಕ್ರವರ್ತಿ ಹೇಳಿದ್ದಾರೆ.

"ಟ್ರ್ಯಾಮ್‌ ನಿಸ್ಸಂದೇಹವಾಗಿಯೂ ಕೋಲ್ಕತ್ತಾದ ಪರಂಪರೆಯ ಭಾಗವಾಗಿದೆ ಮತ್ತು ಹಿಂದಿನ ಶತಮಾನದಲ್ಲಿ ಸಾರಿಗೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಆದರೆ ಈಗ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ಟ್ರ್ಯಾಮ್‌ಗಳು ಅದೇ ಮಾರ್ಗದಲ್ಲಿ ಅದೇ ಸಮಯದಲ್ಲಿ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಿಲ್ಲ ಎಂದು ನಾವು ಗಮನಿಸಿದ್ದೇವೆ. ಇದು ವಾಹನ ದಟ್ಟಣೆಗೆ ಕಾರಣವಾಗುತ್ತಿದೆ" ಎಂದು ಚಕ್ರವರ್ತಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

"ಪೀಕ್ ಅವರ್‌ಗಳಲ್ಲಿ ಟ್ರಾಫಿಕ್ ಜಾಮ್‌ಗಳಿಂದ ಜನ ಕಚೇರಿಗೆ ತಡವಾಗಿ ತೆರಳದಂತೆ ಖಚಿತಪಡಿಸಿಕೊಳ್ಳಲು, ನಾವು ಟ್ರ್ಯಾಮ್‌ ಸೇವೆ ಹಿಂಪಡೆಯುವುದು ಸೇರಿದಂತೆ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ" ಎಂದು ಸಚಿವರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries