ಮುಳ್ಳೇರಿಯ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ನವೀಕರಣ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕಾರಡ್ಕ ಪಂಚಾಯತಿ ಸಮಿತಿಯ ರೂಪೀಕರಣ ಸ¨s ನಿನ್ನೆ ಮುಳ್ಳೇರಿಯ ಶ್ರೀ ಗಣೇಶ ಕಲಾಮಂದಿರದಲ್ಲಿ ನಡೆಯಿತು.
ಸಭೆಯನ್ನು ರವೀಶ ತಂತ್ರಿ ಕುಂಟಾರು ಉದ್ಘಾಟಿಸಿದರು. ಐತ್ತಪ್ಪ ಮವ್ವಾರು ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿಯ ನ್ಯಾಯವಾದಿ ಅನಂತರಾಮ, ಸಂತೋಷ್ ಮಧೂರು, ಸುನಿಲ್ ಕುದ್ರೆಪ್ಪಾಡಿ, ಗಣೇಶ್ ಭಟ್ ಅಳಕ್ಕೆ ಭಾಗವಹಿಸಿ ಮಾರ್ಗದರ್ಶನ ನೀಡಿದರು.ರಘುರಾಮ ಬಲ್ಲಾಳ್, ಸಂಜೀವ ಶೆಟ್ಟಿ ಎಂ, ನಟರಾಜ ನಾಯಕ್ ಮುಂತಾದವರು ಮಾತನಾಡಿದರು.
ಸಭೆಯಲ್ಲಿ ಕಾರಡ್ಕ ಪಂಚಾಯತಿ ಸಮಿತಿಯನ್ನು ರೂಪೀಕರಿಸಲಾಯಿತು ಸಮಿತಿಯ ಗೌರವ ಮಾರ್ಗದರ್ಶಕರಾಗಿ ರವೀಶ ತಂತ್ರಿ ಕುಂಟಾರು, ಗೌರವಾಧ್ಯಕ್ಷರಾಗಿ ರಘುರಾಮ ಬಲ್ಲಾಳ್, ಮಾಧವ್ ಭಟ್ ಕೊಟ್ಟಂಗುಳಿ, ಅಧ್ಯಕ್ಷರಾಗಿ ಡಾ. ವಿ.ವಿ. ರಮಣ, ಪ್ರಧಾನ ಕಾರ್ಯದರ್ಶಿಯಾಗಿ ಹರಿಪ್ರಸಾದ್ ಮುಳ್ಳೇರಿಯ ಆಯ್ಕೆಯಾದರು.ಮಾದವ ಭಟ್ ಕೊಟ್ಟಂಗುಳಿ ಸ್ವಾಗತಿಸಿ, ಹರಿಪ್ರಸಾದ್ ಮುಳ್ಳೇರಿಯ ವಂದಿಸಿದರು.