HEALTH TIPS

ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಓಣಂ ಆಚರಣೆ

            ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಓಣಂ ಸಂಭ್ರಮಾಚರಣೆ ಶುಕ್ರವಾರ ಜರಗಿತು. ಶಾಲಾ ವೇದಿಕೆಯಲ್ಲಿ ಆಕರ್ಷಕ ಪೂಕಳಂ ರಚಿಸಿದ ವಿದ್ಯಾರ್ಥಿಗಳು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೀಡಿದರು. ಮಕ್ಕಳಿಗೆ ಹಾಗೂ ಅಧ್ಯಾಪಕ ವೃಂದದವರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ನಿತ್ಯ ಶಾಲಾ ಸಮವಸ್ತ್ರದಲ್ಲಿ ಆಗಮಿಸುವ ವಿದ್ಯಾರ್ಥಿಗಳು ಸಮಾರಂಭಗಳಿಗೆ ತೆರಳುವಂತೆ ಬಣ್ಣಬಣ್ಣದ ಪೋಷಾಕುಗಳನ್ನು ತೊಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.

ರುಚಿಯಾದ ಓಣಂ ಊಟ :

                15 ಬಗೆಯ ವಿವಿಧ ಭಕ್ಷ್ಯ ಬೋಜ್ಯಗಳನ್ನೊಳಗೊಂಡ ಮಧ್ಯಾಹ್ನದ ಹಬ್ಬದೂಟವನ್ನು ಮಕ್ಕಳು ಜೊತೆಯಾಗಿ ಸವಿದರು. ಸಾಂಪ್ರದಾಯಿಕ ಶೈಲಿಯಲ್ಲಿ ನೆಲದಲ್ಲಿ ಕುಳಿತು ಬಾಳೆ ಎಲೆಯಲ್ಲಿ ಕ್ರಮಬದ್ಧತೆಯಲ್ಲಿ ಎಲ್ಲಾ ಪದಾರ್ಥಗಳ ರುಚಿಯನ್ನೂ ಸಾವಕಾಶವಾಗಿ ಸವಿದರು. ಬಾಳೆ ಎಲೆಯಲ್ಲಿ ಪ್ರತೀ ಪದಾರ್ಥಗಳನ್ನು ಬಡಿಸಿಕೊಳ್ಳುವ ಊಟದ ಶಿಸ್ತಿನ ಬಗ್ಗೆ  ಮುಖ್ಯೋಪಾಧ್ಯಾಯರು ಸವಿವರವಾಗಿ ತಿಳಿಸಿದರು. ಹೈಸ್ಕೂಲು ವಿಭಾಗದ ವಿದ್ಯಾರ್ಥಿಗಳು ತರಕಾರಿ ಹಚ್ಚುವಲ್ಲಿಂದ ಮೊದಲ್ಗೊಂಡು ಕೊನೆಯ ಪಂಕ್ತಿಯಲ್ಲಿ ಊಟ ಪೂರೈಸಿ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ ರೀತಿಯನ್ನು ಶಾಲಾ ಸಂಚಾಲನಾ ಸಮಿತಿ ಸದಸ್ಯರು ಶ್ಲಾಘಿಸಿದರು. ಆಡಳಿತ ಸಮಿತಿ ಸದಸ್ಯರು, ಅಧ್ಯಾಪಕರು, ವಿದ್ಯಾರ್ಥಿಗಳು, ಶಾಲಾ ಅಭಿಮಾನಿಗಳು ಪಾಲ್ಗೊಂಡಿದ್ದರು. 10ನೇ ತರಗತಿಯ ವಿದ್ಯಾರ್ಥಿ ಅವನೀಶ ಶರ್ಮ ಕುಂಜತ್ತೋಡಿ ಮನೆಯವರು ಊಟದ ಪ್ರಾಯೋಜಕತ್ವವನ್ನು ವಹಿಸಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries