ಮೆಣಸಿನಕಾಯಿ, ಸೊಪ್ಪು , ತರಕಾರಿಯಿಂದ ಎಲ್ಲದಕ್ಕೂ ಈಗ ಮೊಬೈಲ್ ಮೂಲಕ ಆನ್‌ಲೈನ್ ಪೇಮೆಂಟ್ ನಡಿಯುತ್ತಿದೆ. ಬಹುತೇಕ ಸಣ್ಣ ಪುಟ್ಟ ವಹಿವಾಟುಗಳು 2000 ಸಾವಿರ ರೂಪಾಯಿಯ ಒಳಗೇ ಇರುತ್ತದೆ. ಇದೀಗ ಈ ಕಡಿಮೆ ಮೊತ್ತದ ಹಣ ವಹಿವಾಟಿನ ಮೇಲೂ ಕೇಂದ್ರ ಸರ್ಕಾರದ ಜಿಎಸ್‌ಟಿ ಕಣ್ಣು ಬಿದ್ದಿದೆ.

ಕೇಂದ್ರ ಸರ್ಕಾರವು ಈಗಾಗಲೇ ದೇಶದಲ್ಲಿ ಹಲವು ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿದೆ. ಕೆಲವು ವಸ್ತುಗಳ ಮೇಲೆ ಶೇ 18ರಷ್ಟು ಜಿಎಸ್‌ಟಿ ಇದ್ದರೆ, ಇನ್ನು ಕೆಲವು ವಸ್ತುಗಳ ಮೇಲೆ ಶೇ 22ರಷ್ಟು ಜಿಎಸ್‌ಟಿ ಇದೆ. ಇದೀಗ ಕೇಂದ್ರ ಸರ್ಕಾರದ ಜಿಎಸ್‌ಟಿ ಕೌನ್ಸಿಲ್ (ಸರಕು ಮತ್ತು ಸೇವಾ ತೆರಿಗೆ) ನಿಂದ 2000 ಸಾವಿರ ರೂಪಾಯಿ ಒಳಗಿನ ವಹಿವಾಟಿಗೂ ಅಂದರೆ ಎರಡು ಸಾವಿರ ರೂಪಾಯಿಯ ವರೆಗೂ ನಡೆಯುವ ಸಣ್ಣ ಡಿಜಿಟಲ್ ಪಾವತಿಯ ಮೇಲೂ ಶೇ 18ರಷ್ಟು ಜಿಎಸ್‌ಟಿ ವಿಧಿಸುವ ಸಾಧಕ - ಬಾಧಕಗಳ ಬಗ್ಗೆ ಚರ್ಚೆ ನಡೆದಿದೆ. ಈ ಸಂಬಂಧ ಈಗಾಗಲೇ ಚರ್ಚೆ ಪ್ರಾರಂಭವಾಗಿದೆ. ಇಲ್ಲಿಯವರೆಗೆ 2000 ಸಾವಿರ ರೂಪಾಯಿ ಒಳಗಿನ ಡಿಜಿಟಲ್ ವಹಿವಾಟಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ.
ಇನ್ನು ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಕ್ರಾಂತಿ ಜೋರಾಗಿದ್ದು, ಇತೀಚಿನ ವರ್ಷಗಳಲ್ಲಿ ಶೇ 80ಕ್ಕೂ ಹೆಚ್ಚರಷ್ಟು ಡಿಜಿಟಲ್ ವಹಿವಾಟುಗಳು 2000 ಸಾವಿರ ರೂಪಾಯಿಗಿಂತ ಕಡಿಮೆ ಇರುತ್ತವೆ. ಇನ್ನು ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರಲಿದ್ದು, ಈ ರೀತಿಯ ಪ್ರಸ್ತಾವನೆಯೊಂದರ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಇಲ್ಲಿಯವರೆಗೆ ಜಿಎಸ್‌ಟಿ ವಿಧಿಸುವ ಬಗ್ಗೆ ಅಧಿಕೃತ ಪ್ರಕಟಣೆ ಇಲ್ಲಿಯವರೆಗೆ ಬಂದಿಲ್ಲ. ಆದರೆ, ಈ ರೀತಿ ಸಣ್ಣ ಡಿಜಿಟಲ್ ವಹಿವಾಟಿನ ಮೇಲೆ ಜಿಎಸ್‌ಟಿ ವಿಧಿಸುವುದರಿಂದ ಸಣ್ಣ ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ ಸಮಸ್ಯೆ ಆಗಲಿದೆ.