ಕುಂಬಳೆ: ಉಪ್ಪಳ ತಾಲೂಕು ಕೇಂದ್ರವಾಗಿರುವ ಮಂಗಲ್ಪಾಡಿ ಆಸ್ಪತ್ರೆಯ ಅಭಿವೃದ್ಧಿ ಹಾಳು ಮಾಡುವ ಹುನ್ನಾರ ನಡೆಯುತ್ತಿದ್ದು, ಸಾಮಾನ್ಯ ರೋಗಿಗಳು ನಂಬಿಕೊಂಡಿರುವ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಕೆಐಎಫ್‍ಬಿಯಿಂದ(ಕಿಫ್ಬಿ) ಮಂಜೂರಾದ 17.5 ಕೋಟಿ ರೂ.ಗಳಲ್ಲಿ ಕೂಡಲೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಬೇಕು ಮತ್ತು ಆಸ್ಪತ್ರೆಯ ನಿರ್ಲಕ್ಷ್ಯವನ್ನು ಕೊನೆಗಾಣಿಸಲು ಆಂದೋಲನವನ್ನು ಆಯೋಜಿಸಲಾಗುವುದು ಎನ್.ಪಿ.ಸಿ.ಎಸ್. (ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ) ಮಂಜೇಶ್ವರ ಬ್ಲಾಕ್ ಸಮಿತಿಯ ಪದಾಧಿಕಾರಿಗಳು ಕುಂಬಳೆ ಪ್ರೆಸ್ ಪೋರಂನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆಸ್ಪತ್ರೆಯ ಅಭಿವೃದ್ಧಿಗೆ ವರ್ಷಗಳ ಹಿಂದೆ ಕೆಐಎಫ್‍ಬಿಯಿಂದ ಸರ್ಕಾರ ಮಂಜೂರು ಮಾಡಿದ ಹಣ ನನೆಗುದಿಗೆ ಬಿದ್ದಿದೆ. ಕಿಡ್ಕೋ ಸಂಸ್ಥೆಗೆ ನಿರ್ಮಾಣ ಕಾರ್ಯ ವಹಿಸಿದ ಬಳಿಕ ಹಳೆ ಕಟ್ಟಡ ಕೆಡವಿ ಮಣ್ಣು ಪರೀಕ್ಷೆ ನಡೆಸಿದ್ದು ಬಿಟ್ಟರೆ ಬೇರೆ ಯಾವುದೇ ಕಾಮಗಾರಿ ನಡೆದಿಲ್ಲ. ಶಾಸಕರು ಅಥವಾ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಮಾಹಿತಿ ನೀಡದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಸ್ಥಳೀಯ ಸ್ವಯಂಸೇವಾ ಸಂಸ್ಥೆಯು ದೀರ್ಘಕಾಲದಿಂದ ಉಪವಾಸ ಸತ್ಯಾಗ್ರಹ ನಡೆಸಿದ್ದರ ಫಲವಾಗಿ ಈ ಹಣ ಮಂಜೂರಾಗಿದೆ. ಅನುದಾನ ಬಳಕೆಯಾಗದಿರುವ ಕುರಿತು ವಿವಿಧೆಡೆಯಿಂದ ಕೇಳಿಬಂದ ದೂರುಗಳ ಹಿನ್ನೆಲೆಯಲ್ಲಿ ಎನ್‍ಸಿಪಿ-ಎಸ್ ಆಂದೋಲನಕ್ಕೆ ಮುಂದಾಗಿದೆ.
ಆಸ್ಪತ್ರೆ ಅಭಿವೃದ್ಧಿ ಅತ್ಯಗತ್ಯವಾಗಿದ್ದು, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷಿಸುತ್ತಿರುವುದು ಜನತೆಗೆ ಸವಾಲಾಗಿದೆ. ಆಸ್ಪತ್ರೆ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ಎಷ್ಟೇ ಪ್ರಯತ್ನ ನಡೆಸುವುದು ಹೌದಾದರೆ ಲ್ಲೆಲ್ಲಿ ಅವ್ಯವಸ್ಥೆ ಇದೆ ಎಂಬ ಕುತೂಹಲ ಸ್ಥಳೀಯರಲ್ಲಿದೆ. ತಾಲೂಕು ಆಸ್ಪತ್ರೆಯನ್ನು ಕುಟುಂಬ ಆರೋಗ್ಯ ಕೇಂದ್ರದ ಸ್ಥಿತಿಗೆ ದೂಡಬಾರದು ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ತಿಳಿಸಿದೆ. ಆದ್ದರಿಂದ ಆಸ್ಪತ್ರೆಯ ಅಭಿವೃದ್ಧಿಗೆ ಧಕ್ಕೆ ತರುವ ಪ್ರಯತ್ನ ಯಾರೇ ಮಾಡಿದರೂ ಎದುರಿಸಲು ಎನ್‍ಸಿಪಿಎಸ್ ಪ್ರಯತ್ನಿಸಲಿದೆ ಎಂದು ಮುಖಂಡರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಎನ್‍ಸಿಪಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುಬೇರ್ ಪಡ್ಪು, ಮಂಜೇಶ್ವರ ಬ್ಲಾಕ್ ಅಧ್ಯಕ್ಷ ಮಹ್ಮದ್ ಕೈಕಂಬ, ಸಾರ್ವಜನಿಕ ಕಾರ್ಯದರ್ಶಿ ಮುಹಮ್ಮದ್ ಆನೆಬಾಗಿಲು, ಸಿದ್ದೀಕ್ ಕೈಕಂಬ ಮತ್ತು ಖದೀಜಾ ಮೊಗ್ರಾಲ್ ಉಪಸ್ಥಿತರಿದ್ದರು.