ಬದಿಯಡ್ಕ:ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಚತುರ್ಥ ಚಾತುರ್ಮಾಸ್ಯದ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ನಟನ ತರಂಗಿಣಿ ಬೆಂಗಳೂರು ಪ್ರಸ್ತುತಪಡಿಸಲಿರುವ ನಾದ ನೃತ್ಯಾನುಭವ ಕಾರ್ಯಕ್ರಮ ಸೆ. 13ರಂದು ಮಧ್ಯಾಹ್ನ 2ರಿಂದ ಶ್ರೀಮಠದ ಸಭಾಂಗಣದಲ್ಲಿ ನಡೆಯಲಿರುವುದು.
ಕಾರ್ಯಕ್ರಮದ ಅಂಗವಾಗಿ ವೀಣಾ ವಾದನ, ವಯಲಿನ್ ವಾದನ, ಮೃದಂಗ ವಾದನ, ಹಾಡುಗಾರಿಕೆ ನಡೆಯುವುದು. ಸಂಜೆ 7.45ಕ್ಕೆ ಚಿತ್ರವೀಣಾ ಮತ್ತು ಕೊಳಲು ಜುಗಲ್‍ಬಂದಿಯಲ್ಲಿ ಚಿತ್ರವೀಣಾ ಗಣೇಶ್ ಚೆನ್ನೈ ಮತ್ತು ವಿಜಯ್‍ಗೋಪಾಲ್ ಚೆನ್ನೈ ಕಾರ್ಯಕ್ರಮ ನಡೆಸಿಕೊಡುವರು. ರಾತ್ರಿ 9.30ರಿಂದ ನಟನ ತರಂಗಿಣಿ ಸಂಗೀತ ನೃತ್ಯ ಶಾಲೆ ಬೆಂಗಳೂರು ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ಜರುಗಲಿರುವುದು.