ಕಾಸರಗೋಡು: ಜಿಲ್ಲಾ ಕೌಶಲ್ಯ ಸಮಿತಿ ಮತ್ತು ಜಿಲ್ಲಾಡಳಿತ ಜಂಟಿಯಾಗಿ ಜಿಲ್ಲೆಯಲ್ಲಿ ತರಬೇತಿ ಸೇವಾ ಪೂರೈಕೆ ಶೃಂಗಸಭೆಯನ್ನು ಕಾಂಞಂಗಾಡ್ ಆಲಮಿಪಳ್ಳಿಯ ರಾಜ್ ರೆಸಿಡೆನ್ಸಿಯಲ್ಲಿ ನಡೆಸಿತು. ಅಭಿವೃದ್ಧಿ ಮಿಷನ್ ವ್ಯವಸ್ಥಾಪಕ ನಿರ್ದೇಶಕ ಸುಫಿಯಾನ್ ಅಹ್ಮದ್ ಉದ್ಘಾಟಿಸಿದರು.
ಕಾಞಂಗಾಡು ಸಬ್ ಕಲೆಕ್ಟರ್ ಪ್ರತೀಕ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಟಿ.ವಿ.ವಿನೋದ್ ಮುಖ್ಯ ಭಾಷಣ ಮಾಡಿದರು. ಜಿಲ್ಲಾ ಉದ್ಯೋಗಾಧಿಕಾರಿ ಅಜಿತ್ ಜಾನ್ ಮಾತನಾಡಿದರು.
ಜಿಲ್ಲಾ ಯೋಜನಾಧಿಕಾರಿ ಟಿ. ರಾಜೇಶ್ ಸ್ವಾಗತಿಸಿ, ಸಂಯೋಜಕ ಎಂ.ಜಿ.ನಿದಿನ್ ವಂದಿಸಿದರು.
ಅನೇಕ ಕೌಶಲ್ಯ ಯೋಜನೆಗಳು ಜಾರಿಯಲ್ಲಿದ್ದರೆ, ಅವುಗಳ ಸಮರ್ಪಕ ಅನುμÁ್ಠನದಲ್ಲಿ ಮಿತಿಗಳಿದ್ದು, ಅದನ್ನು ಪರಿಹರಿಸಲು ಸೇವಾ ಪೂರೈಕೆ ಶೃಂಗಸಭೆಗಳು ಸಹಾಯ ಮಾಡುತ್ತವೆ ಎಂದು ವ್ಯವಸ್ಥಾಪಕ ನಿರ್ದೇಶಕರು ಹೇಳಿದರು.
ಸಮಾರಂಭದಲ್ಲಿ ರಾಜ್ಯ ಕೌಶಲ್ಯಾಭಿವೃದ್ಧಿ ಮಿಷನ್ ಪ್ರತಿನಿಧಿಗಳು ವಿವಿಧ ವಿಷಯಗಳ ಕುರಿತು ತರಗತಿಗಳನ್ನು ನಡೆಸಿದರು.