ನವದೆಹಲಿ: 'ಭಾರತ ಮಾತೆಯ ಹಾಗೂ ಪ್ರೀತಿಯ ಧ್ವನಿ ದೇಶದೆಲ್ಲೆಡೆ ಕೇಳಿಸುವಂತೆ ಮಾಡುವುದೇ ನಮ್ಮ ಗುರಿಯಾಗಿದೆ' ಎಂದು 'ಭಾರತ್ ಜೋಡೊ ಯಾತ್ರೆ'ಯ ಎರಡನೇ ವರ್ಷಾಚರಣೆಯ ವೇಳೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ನವದೆಹಲಿ: 'ಭಾರತ ಮಾತೆಯ ಹಾಗೂ ಪ್ರೀತಿಯ ಧ್ವನಿ ದೇಶದೆಲ್ಲೆಡೆ ಕೇಳಿಸುವಂತೆ ಮಾಡುವುದೇ ನಮ್ಮ ಗುರಿಯಾಗಿದೆ' ಎಂದು 'ಭಾರತ್ ಜೋಡೊ ಯಾತ್ರೆ'ಯ ಎರಡನೇ ವರ್ಷಾಚರಣೆಯ ವೇಳೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.
'ಸ್ವತಸ್ಸಿದ್ಧವಾಗಿ ಭಾರತೀಯರು ಪ್ರೀತಿಸುವ ಜನರು ಎಂದು ಯಾತ್ರೆಯು ಸಾಬೀತುಪಡಿಸಿತು. ನಾನು ಯಾತ್ರೆಯ ಆರಂಭದಲ್ಲಿ ದ್ವೇಷದ ಮೇಲೆ ಪ್ರೀತಿಯು ಜಯ ಗಳಿಸಲಿದೆ ಮತ್ತು ಭಯವನ್ನು ಸೋಲಿಸಲಿದೆ ಎಂದು ಹೇಳಿದ್ದೆ. ಇಂದಿಗೂ ನಮ್ಮ ಧ್ಯೇಯವು ಅದೇ ಆಗಿದೆ. ಭಾರತ ಮಾತೆಯ ಹಾಗೂ ಪ್ರೀತಿಯ ಧ್ವನಿ ದೇಶದೆಲ್ಲೆಡೆ ಕೇಳಿಸುವಂತೆ ಮಾಡುವುದೇ ನಮ್ಮ ಗುರಿಯಾಗಿದೆ' ಎಂದು ಹೇಳಿದ್ದಾರೆ.
2022ರ ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೊ ಪಾದಯಾತ್ರೆಯು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 3,570 ಕಿ.ಮೀ. ಅಧಿಕ ದೂರ ಸಂಚರಿಸಿತ್ತು. ಈ ಸಂದರ್ಭದಲ್ಲಿ ಜನರ ಸಮಸ್ಯೆಗಳನ್ನು ರಾಹುಲ್ ಗಾಂಧಿ ಆಲಿಸಿದ್ದರು.