ರಾಂಚಿ: ರಾಂಚಿ ರೈಲ್ ಯಾರ್ಡ್ ನಲ್ಲಿ 2 ರೈಲು ಇಂಜಿನ್ ಗಳು ಹಳಿ ತಪ್ಪಿವೆ. ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಬಫರ್ ಸ್ಟಾಪ್ ಗೆ ಇಂಜಿನ್ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮುರಿ ಎಂಬ ಪ್ರದೇಶದಲ್ಲಿನ ಸುಯಿಸಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಹಳಿತಪ್ಪಿದ ನಂತರ, ಎಂಜಿನ್‌ಗಳಲ್ಲಿ ಒಂದು ಅದರ ಬದಿಯಲ್ಲಿ ಬಿದ್ದಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಇಂಜಿನ್‌ಗಳಿಗೆ ಯಾವುದೇ ಬೋಗಿಯನ್ನು ಜೋಡಿಸಲಾಗಿಲ್ಲ. ಇದರಿಂದ ಯಾವುದೇ ಹಾನಿ ಸಂಭವಿಸಿಲ್ಲ" ಎಂದು ರಾಂಚಿ ರೈಲ್ವೆ ವಿಭಾಗದ ಸಿಪಿಆರ್‌ಒ ನಿಶಾಂತ್ ಕುಮಾರ್ ಹೇಳಿದ್ದು, ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸಿಲ್ಲಿಯ ಉಪ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.