HEALTH TIPS

ಬಾಳೆಹಣ್ಣು ಬೇಗ ಹಾಳಾಗದಂತೆ ಇಡಲು ಇಲ್ಲಿದೆ ಸುಲಭ ಉಪಾಯ!

 ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ. ಈ ಕಾರಣದಿಂದಾಗಿ ಬಾಳೆಹಣ್ಣಿನ ಸೇವನೆಯು ಮೂಳೆಗಳನ್ನು ಬಲಪಡಿಸಲು ಕೆಲಸ ಮಾಡುತ್ತದೆ. ಬೇಸಿಗೆಯಲ್ಲಿ, ಬಾಳೆಹಣ್ಣನ್ನು ಶಕ್ತಿಯ ಪ್ರಮುಖ ಮೂಲವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಕೆಲವರು ಬಾಳೆಹಣ್ಣನ್ನು ಪ್ರತಿದಿನ ಸೇವಿಸಲು ಇಷ್ಟಪಡುತ್ತಾರೆ.

ಆದರೆ, ಪ್ರತಿದಿನ ಮಾರುಕಟ್ಟೆಯಿಂದ ಬಾಳೆಹಣ್ಣು ತರಲು ಸಾಧ್ಯವಿಲ್ಲ. ಹಾಗಾಗಿ ವಾರಕ್ಕೊಮ್ಮೆ ಬಾಳೆಹಣ್ಣು ಖರೀದಿ ಮಾಡ್ತೇವೆ. ಶಾಖದ ಕಾರಣ, ಬಾಳೆಹಣ್ಣುಗಳು ಸ್ವಲ್ಪ ಸಮಯದಲ್ಲೇ ಕೊಳೆಯಲು ಅಥವಾ ಹಾಳಾಗಲು ಪ್ರಾರಂಭಿಸುತ್ತವೆ. ಹಾಗಾದರೆ ಬಾಳೆಹಣ್ಣುಗಳನ್ನು ಹೇಗೆ ಸುಲಭವಾಗಿ ಸಂಗ್ರಹಿಸಬಹುದು ಎಂದು ನಾವು ಹೇಳ್ತೇವೆ.

ಕಾಗದದಲ್ಲಿ ಮುಚ್ಚಿ : ಬಾಳೆಹಣ್ಣಿನ ಕಾಂಡ ಭಾಗ ಮೊದಲು ಕೊಳೆಯಲು ಶುರುವಾಗುತ್ತದೆ. ಅಲ್ಲಿಂದಲೇ ಹಣ್ಣು ಕಪ್ಪಾಗಲು ಶುರುವಾಗುತ್ತದೆ. ಆದ್ದರಿಂದ, ಬಾಳೆಹಣ್ಣನ್ನು ಇಡುವ ಮೊದಲು, ಅದರ ಕಾಂಡವನ್ನು ಕಾಗದ ಅಥವಾ ಪ್ಲಾಸ್ಟಿಕ್‌ನಲ್ಲಿ ಸುತ್ತಿ. ಇದರಿಂದ ಬಾಳೆಹಣ್ಣು ಬೇಗ ಕೆಡುವುದಿಲ್ಲ.

ಬಾಳೆ ಹಣ್ಣಿನ ಹ್ಯಾಂಗರ್ : ಅನೇಕ ಬಾರಿ ವಾರಗಳವರೆಗೆ ಬಾಳೆ ಹಣ್ಣನ್ನು ಇಡಬೇಕಾಗುತ್ತದೆ. ಹಣ್ಣುಗಳನ್ನು ನೆಲಕ್ಕೆ ಇಡುವುದ್ರಿಂದ ಬೇಗ ಕೊಳೆಯುತ್ತದೆ. ಸದಾ ಮನೆಯಲ್ಲಿ ಬಾಳೆ ಹಣ್ಣು ಬೇಕು, ಪ್ರತಿ ದಿನ ಬಾಳೆ ಹಣ್ಣು ತಿನ್ನುತ್ತೇವೆ ಎನ್ನುವವರು ನೀವಾಗಿದ್ದರೆ ಬಾಳೆ ಹಣ್ಣನ್ನು ಇಡುವ ಹ್ಯಾಂಗರ್ ಖರೀದಿ ಮಾಡಿ. ಈ ಹ್ಯಾಂಗರ್‌ಗಳಲ್ಲಿ ಬಾಳೆಹಣ್ಣನ್ನು ಇಡುವುದರಿಂದ ಹಣ್ಣು ಬೇಗ ಕೊಳೆತು ಹಾಳಾಗುವುದಿಲ್ಲ.

ವಿಟಮಿನ್ ಸಿ ಟ್ಯಾಬ್ಲೆಟ್ : ಬಾಳೆಹಣ್ಣುಗಳು ಹಾಳಾಗುವುದನ್ನು ತಡೆಯಲು ನೀವು ವಿಟಮಿನ್ ಸಿ ಟ್ಯಾಬ್ಲೆಟ್‌ನ ಸಹಾಯ ತೆಗೆದುಕೊಳ್ಳಬಹುದು. ಈ ಮಾತ್ರೆಗಳು ಎಲ್ಲ ಮೆಡಿಕಲ್ ಶಾಪ್ ನಲ್ಲಿ ಸಿಗ್ತವೆ. ವಿಟಮಿನ್ ಸಿ ಟ್ಯಾಬ್ಲೆಟ್ ಅನ್ನು ಸ್ವಲ್ಪ ನೀರಿನಲ್ಲಿ ಕರಗಿಸಿ ಮತ್ತು ಬಾಳೆಹಣ್ಣನ್ನು ಈ ನೀರಿನಲ್ಲಿ ಇರಿಸಿ. ಇದ್ರಿಂದ ಬಾಳೆ ಹಣ್ಣು ಹಾಳಾಗುವುದಿಲ್ಲ. ಕೆಲ ದಿನಗಳವರೆಗೆ ಬಾಳಿಕೆ ಬರುತ್ತದೆ.

ಬಾಳೆ ಹಣ್ಣನ್ನು ಫ್ರಿಜ್ ನಲ್ಲಿಡಬೇಡಿ: ಬಾಳೆ ಹಣ್ಣು ಹಾಳಾಗ್ಬಾರದು ಎನ್ನುವ ಕಾರಣಕ್ಕೆ ಅನೇಕರು ಫ್ರಿಜ್ ನಲ್ಲಿ ಇಡ್ತಾರೆ. ಆದ್ರೆ ಅಪ್ಪಿತಪ್ಪಿಯೂ ಫ್ರಿಜ್ ನಲ್ಲಿ ಬಾಳೆ ಹಣ್ಣನ್ನು ಇಡಬಾರದು. ಬಾಳೆಹಣ್ಣನ್ನು ಫ್ರಿಜ್ ನಲ್ಲಿಟ್ಟರೆ ಅದರ ಸಿಪ್ಪೆ ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತವೆ ಮತ್ತು ಬಾಳೆಹಣ್ಣು ಬೇಗನೆ ಹಾಳಾಗುತ್ತದೆ. ಆದ್ದರಿಂದ, ಬಾಳೆಹಣ್ಣುಗಳನ್ನು ಸಾಮಾನ್ಯ ಕೋಣೆಯ ಉಷ್ಣಾಂಶದಲ್ಲಿ ಇಡುವುದು ಉತ್ತಮ.

ಪ್ಲಾಸ್ಟಿಕ್ ನಲ್ಲಿ ಸುತ್ತಿಡಿ : ಬಾಳೆಹಣ್ಣುಗಳು ದೀರ್ಘಕಾಲದವರೆಗೆ ಕೊಳೆಯದಂತೆ ಅಥವಾ ಹಾಳಾಗದಂತೆ ಇಡಲು ಅವುಗಳ ಕಾಂಡಗಳನ್ನು ಒಡೆಯಿರಿ. ಇದರ ನಂತರ, ಬಾಳೆಹಣ್ಣುಗಳನ್ನು ಪಾಲಿಥಿನ್ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ. ಇದರಿಂದಾಗಿ ಬಾಳೆಹಣ್ಣಿನಲ್ಲಿ ಗಾಳಿ ಇರುವುದಿಲ್ಲ ಮತ್ತು ಬಾಳೆಹಣ್ಣುಗಳು ದೀರ್ಘಕಾಲ ತಾಜಾ ಆಗಿರುತ್ತದೆ. ಈ ಟಿಪ್ಸ್ ನಲ್ಲಿ ಯಾವುದನ್ನಾದ್ರೂ ಒಂದನ್ನು ಪಾಲಿಸಿ ಬಾಳೆ ಹಣ್ಣು ಹಾಳಾಗದಂತೆ ರಕ್ಷಿಸಿ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries