HEALTH TIPS

ವಿಶ್ವದ ಮೊದಲ ಖಾಸಗಿ 'ಬಾಹ್ಯಾಕಾಶ ನಡಿಗೆ' ಯಶಸ್ವಿ

 ಕೇಪ್‌ ಕ್ಯಾನವೆರೆಲ್: 'ಸ್ಪೇಸ್‌ಎಕ್ಸ್‌' ಸಂಸ್ಥೆಯ ಸಹಯೋಗದೊಂದಿಗೆ ಉದ್ಯಮಿ ಸೇರಿದಂತೆ ನಾಲ್ವರು ಗುರುವಾರ ಯಶಸ್ವಿಯಾಗಿ 'ಬಾಹ್ಯಾಕಾಶ ನಡಿಗೆ'ಯಲ್ಲಿ ಪಾಲ್ಗೊಂಡರು.

ಈ ಮೂಲಕ ಇದೇ ಮೊದಲ ಬಾರಿಗೆ ಖಾಸಗಿಯಾಗಿ ಆಯೋಜಿಸಲಾಗಿದ್ದ 'ವಿಶ್ವದ ಮೊದಲ ಬಾಹ್ಯಾಕಾಶ ನಡಿಗೆ'ಯು ಯಶಸ್ವಿಯಾದಂತಾಯಿತು.

ಟೆಕ್‌ ಉದ್ಯಮಿ ಜರೆಡ್ ಐಸಾಕ್‌ಮನ್‌ ಹಾಗೂ ಇನ್ನೂ ಮೂವರು ಈ 'ಬಾಹ್ಯಾಕಾಶ ನಡಿಗೆ'ಯ ಮುದದ ಕ್ಷಣಗಳನ್ನು ಅನುಭವಿಸಿದರು.

ಸಾಮಾನ್ಯವಾಗಿ ತರಬೇತಿ ಹೊಂದಿದ ಗಗನಯಾತ್ರಿಗಳನ್ನು ಮಾತ್ರವೇ ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ಆದರೆ ಅವರ ಹೊರತಾಗಿ ಸಾಮಾನ್ಯರೂ ಬಾಹ್ಯಾಕಾಶಕ್ಕೆ ಹೋಗಿ ಅಪರೂಪದ ಸಾಧನೆ ಮಾಡಿದ್ದಾರೆ. ಇದನ್ನು 'ಬಾಹ್ಯಾಕಾಶ ಪ್ರವಾಸ' ಎಂದು ಬಣ್ಣಿಸಬಹುದು.

ಸ್ಪೇಸ್‌ಎಕ್ಸ್ ಆಯೋಜಿಸಿದ್ದ ಈ 'ಬಾಹ್ಯಾಕಾಶ ನಡಿಗೆ' ಯೋಜನೆಯಲ್ಲಿ ಅದರ ಸಿಬ್ಬಂದಿ ಸೇರಿ ನಾಲ್ವರು ಗಗನನೌಕೆಯಲ್ಲಿ ಬಾಹ್ಯಾಕಾಶ ತಲುಪಿದರು. ಭೂಮಿಯಿಂದ ಸುಮಾರು 740 ಕಿ.ಮೀ. ದೂರದ ಕಕ್ಷೆಯಲ್ಲಿ 'ಬಾಹ್ಯಾಕಾಶ ನಡಿಗೆ' ಯಶಸ್ವಿಯಾಗಿ ನಡೆಯಿತು.

'ಬಾಹ್ಯಾಕಾಶ ನಡಿಗೆ'ಗೆಂದು ಗುರುತಿಸಲಾಗಿದ್ದ ಅನುಕೂಲಕರ ‍ಸ್ಥಳದಲ್ಲಿ ನೌಕೆಯು ನಿಂತ ಬಳಿಕ, ಅದರಿಂದ ಹೊರಬಂದ ಐಸಾಕ್‌ಮನ್‌ 'ಬಾಹ್ಯಾಕಾಶ ನಡಿಗೆ'ಯನ್ನು ಸಂಭ್ರಮಿಸಿದರು.

ನಲವತ್ತೊಂದು ವರ್ಷದ ಐಸಾಕ್‌ಮನ್‌ ಅವರು 'ಶಿಫ್ಟ್‌4' ಎಂಬ ಕ್ರೆಡಿಟ್‌ ಕಾರ್ಡ್ ಪ್ರೊಸೆಸಿಂಗ್‌ ಸಂಸ್ಥೆಯ ಸಂಸ್ಥಾಪಕರು ಹಾಗೂ ಸಿಇಒ. ಭೂಮಿಗೆ ಬಂದ ಬಳಿಕ ತಮ್ಮ ಅನುಭವ ಹಂಚಿಕೊಂಡ ಅವರು 'ಮನೆಗೆ ಬಂದೆವು. ನಮಗೆಲ್ಲ ಮಾಡಲು ಸಾಕಷ್ಟು ಕೆಲಸವಿದೆ. ಬಾಹ್ಯಾಕಾಶದಿಂದ ಜಗತ್ತು ಪರಿಪೂರ್ಣವೆಂಬಂತೆ ಕಂಡಿತು' ಎಂದರು.

ಬಾಹ್ಯಾಕಾಶ ನಡಿಗೆ ಎಂದರೆ ಗಾಳಿಯಲ್ಲಿ ತೇಲುತ್ತಲೇ ನಡೆಯುವುದು ಎಂದು ಅರ್ಥವಲ್ಲ. ಬಾಹ್ಯಾಕಾಶದ ನಿರ್ದಿಷ್ಟ ಸ್ಥಳದಲ್ಲಿ, ಗಗನನೌಕೆಯಲ್ಲಿ ನಿಂತು ಬಾಹ್ಯಾಕಾಶದ ಸುತ್ತಲಿನ ವಾತಾವರಣವನ್ನು ಅನುಭವಿಸುವುದಾಗಿದೆ.

ಈವರೆಗೆ 12 ದೇಶಗಳ ಸುಮಾರು 263 ಜನರು 'ಬಾಹ್ಯಾಕಾಶ ನಡಿಗೆ'ಯಲ್ಲಿ ಪಾಲ್ಗೊಂಡಿದ್ದಾರೆ. 1965ರಲ್ಲಿ ರಷ್ಯಾದ ಅಲೆಕ್ಸಿ ಲಿಯೋನೊವ್‌ ಅವರು ಮೊದಲ ಬಾರಿಗೆ 'ಬಾಹ್ಯಾಕಾಶ ನಡಿಗೆ'ಯನ್ನು ಕೈಗೊಂಡಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries