ಒಟ್ಟಾವ: ವಿದೇಶಿ ವಿದ್ಯಾರ್ಥಿಗಳು ದೇಶದಲ್ಲಿ ಅಧ್ಯಯನ ಕೈಗೊಳ್ಳಲು ನೀಡಲಾಗುವ ಪರವಾನಗಿಗಳನ್ನು ಕಡಿಮೆ ಮಾಡುವುದಾಗಿ ಕೆನಡಾ ಘೋಷಿಸಿದೆ. ಕೆನಡಾದ ಈ ನಿರ್ಧಾರದಿಂದ ಅನೇಕ ಭಾರತೀಯರಿಗೆ ಅನನುಕೂಲವಾಗುವ ಸಾಧ್ಯತೆ ಇದೆ.
ಒಟ್ಟಾವ: ವಿದೇಶಿ ವಿದ್ಯಾರ್ಥಿಗಳು ದೇಶದಲ್ಲಿ ಅಧ್ಯಯನ ಕೈಗೊಳ್ಳಲು ನೀಡಲಾಗುವ ಪರವಾನಗಿಗಳನ್ನು ಕಡಿಮೆ ಮಾಡುವುದಾಗಿ ಕೆನಡಾ ಘೋಷಿಸಿದೆ. ಕೆನಡಾದ ಈ ನಿರ್ಧಾರದಿಂದ ಅನೇಕ ಭಾರತೀಯರಿಗೆ ಅನನುಕೂಲವಾಗುವ ಸಾಧ್ಯತೆ ಇದೆ.
ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಈ ವರ್ಷ ವಿದೇಶಿ ವಿದ್ಯಾರ್ಥಿಗಳಿಗೆ ಶೇ 35ರಷ್ಟು ಪರವಾನಗಿಗಳನ್ನು ನೀಡಲಿದ್ದೇವೆ. ಮುಂದಿನ ವರ್ಷ ಈ ಪ್ರಮಾಣದಲ್ಲಿ ಶೇ 10ರಷ್ಟು ಕಡಿತ ಮಾಡುತ್ತೇವೆ' ಎಂದಿದ್ದಾರೆ.
'ವಲಸೆಯಿಂದ ದೇಶದ ಆರ್ಥಿಕತೆಗೆ ಅನುಕೂಲವಾಗಲಿದೆ. ಆದರೆ, ಕೆಲ ಕಿಡಿಗೇಡಿಗಳು ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವುದು ಮತ್ತು ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವುದು ಕಂಡುಬಂದಾಗ ಅಂತಹ ಚಟುವಟಿಕೆಗಳನ್ನು ಮಟ್ಟಹಾಕುತ್ತೇವೆ' ಎಂದು ಹೇಳಿದ್ದಾರೆ.
ಉನ್ನತ ಅಧ್ಯಯನಕ್ಕಾಗಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಕೆನಡಾಕ್ಕೆ ತೆರಳುತ್ತಾರೆ. ಒಟ್ಟಾವದಲ್ಲಿರುವ ಭಾರತೀಯ ಹೈಕಮಿಷನ್ ವೆಬ್‌ಸೈಟ್‌ನಲ್ಲಿನ ಮಾಹಿತಿ ಪ್ರಕಾರ, ಕೆನಡಾದಲ್ಲಿ 4,27,000 ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ಕೈಗೊಂಡಿದ್ದಾರೆ.