HEALTH TIPS

'ಫೇಮ್‌' ಬದಲು 'ಪಿಎಂ ಇ-ಡ್ರೈವ್': ಇ.ವಿ. ಬಳಕೆ ಉತ್ತೇಜಿಸಲು ಕೇಂದ್ರದ ಹೊಸ ಯೋಜನೆ

 ವದೆಹಲಿ: ₹10,900 ಕೋಟಿ ಗಾತ್ರದ, ಎರಡು ವರ್ಷಗಳ ಅವಧಿಯ 'ಪಿಎಂ ಇ-ಡ್ರೈವ್ ಯೋಜನೆ'ಗೆ ಕೇಂದ್ರ ಸಚಿವ ಸಂಪುಟವು ಬುಧವಾರ ಒಪ್ಪಿಗೆ ನೀಡಿದೆ. ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಿಸುವುದಕ್ಕೆ ಉತ್ತೇಜನ ನೀಡುವುದು ಈ ಯೋಜನೆಯ ಉದ್ದೇಶ.

ಒಂಬತ್ತು ವರ್ಷ ಚಾಲ್ತಿಯಲ್ಲಿದ್ದ ಫೇಮ್ ಯೋಜನೆಯ ಬದಲಿಗೆ ಈ ಯೋಜನೆಯು ಜಾರಿಗೆ ಬರಲಿದೆ.

ಫೇಮ್ ಯೋಜನೆಯು ಮಾರ್ಚ್‌ ತಿಂಗಳಿಗೆ ಅಂತ್ಯಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು 'ಪಿಎಂ ಇ-ಡ್ರೈವ್' ಯೋಜನೆಗೆ ಅನುಮೋದನೆ ನೀಡಿತು ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಈ ಯೋಜನೆಯ ಅಡಿಯಲ್ಲಿ 24.7 ಲಕ್ಷ ಇ.ವಿ. ದ್ವಿಚಕ್ರ ವಾಹನಗಳಿಗೆ, 3.16 ಲಕ್ಷ ಇ.ವಿ. ತ್ರಿಚಕ್ರ ವಾಹನಗಳಿಗೆ ಮತ್ತು 14,082 ಇ.ವಿ. ಬಸ್ಸುಗಳಿಗೆ ನೆರವು ದೊರೆಯಲಿದೆ. ಅಲ್ಲದೆ, 88,500 ಚಾರ್ಜಿಂಗ್ ಕೇಂದ್ರಗಳಿಗೂ ಈ ಯೋಜನೆಯ ಅಡಿಯಲ್ಲಿ ನೆರವು ಲಭ್ಯವಾಗಲಿದೆ ಎಂದು ವೈಷ್ಣವ್ ಮಾಹಿತಿ ನೀಡಿದರು.

ಇ.ವಿ. ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಇ-ಆಂಬುಲೆನ್ಸ್‌ಗಳು ಮತ್ತು ಇ-ಟ್ರಕ್ಕುಗಳ ಬಳಕೆಯನ್ನು ಉತ್ತೇಜಿಸಲು ಹೊಸ ಯೋಜನೆಯು ₹3,679 ಕೋಟಿ ಮೊತ್ತದ ಸಬ್ಸಿಡಿಯನ್ನು ಒದಗಿಸಲಿದೆ.

ರಾಜ್ಯಗಳ ಸಾರಿಗೆ ಸಂಸ್ಥೆಗಳು ಹಾಗೂ ಸಾರ್ವಜನಿಕ ಸಾರಿಗೆ ಸಂಸ್ಥೆಗಳಿಗೆ ಒಟ್ಟು 14,082 ವಿದ್ಯುತ್ ಚಾಲಿತ ಬಸ್ಸುಗಳನ್ನು ಖರೀದಿಸಲು ನೆರವಾಗುವ ಉದ್ದೇಶಕ್ಕೆ ಯೋಜನೆಯ ಅಡಿಯಲ್ಲಿ ₹4,391 ಕೋಟಿ ತೆಗೆದಿರಿಸಲಾಗಿದೆ.

ಮುಂದಿನ ಎಂಟು ವರ್ಷಗಳಲ್ಲಿ, ₹12,461 ಕೋಟಿ ಗಾತ್ರದ 31,350 ಮೆಗಾ ವಾಟ್‌ ಸಾಮರ್ಥ್ಯದ ಜಲವಿದ್ಯುತ್ ಯೋಜನೆಗಳ ಅಭಿವೃದ್ಧಿಗೆ ನೆರವು ಒದಗಿಸಲು ಸಂಪುಟವು ಒಪ್ಪಿಗೆ ನೀಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries