ಕಾಸರಗೋಡು: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಕೇರಳ ರಾಜ್ಯ ಸೇವಾ ಪಿಂಚಣಿದಾರರ ಸಂಘದ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ನಡೆಯಿತು. ಕಾಸರಗೋಡು ಶ್ರಈ ಮಲ್ಲಿಕಾರ್ಜುನ ದೇವಸ್ಥಾನ ವಠಾರದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಧರಣಿಯನ್ನು ಹಿಂದೂ ಐಕ್ಯವೇದಿ ಕಾಸರಗೋಡು ಜಿಲ್ಲಾಧ್ಯಕ್ಷ ಎಸ್. ಪಿ. ಶಾಜಿ ಉದ್ಘಾಟಿಸಿದರು.
ಕೇರಳ ರಾಜ್ಯ ಪಿಂಚಣಿದಾರರ ಸಂಘದ ಕಾಸರಗೋಡು ಜಿಲ್ಲಾಧ್ಯಕ್ಷ ಮುತ್ತುಕೃಷ್ಣನ್ ನೇತೃತ್ವ ವಹಿಸಿದ್ದರು. ಹಿಂದೂ ಐಕ್ಯವೇದಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ. ಸುಧಾಕರನ್, ಪಿಂಚಣಿದಾರರ ಸಂಘದ ಮುಖಂಡರಾದ ಅಶೋಕ್ ಬಾಡೂರು, ಓ. ಕೆ. ಕುಞÂರಾಮನ್ ಮಾಸ್ಟರ್, ಸೀತಾರಾಮ ರಾವ್, ಸವಿತಾ ಟೀಚರ್, ನಾರಾಯಣ ರಾವ್, ಕೇಶವ ಭಟ್ ಮತ್ತು ವಿಘ್ನೇಶ್ವರ ಕೆದುಕೋಡಿ ಉಪಸ್ಥಿತರಿದ್ದರು. ಸಂಘಟನೆ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಿ. ನಾಗರಾಜ್ ಸ್ವಾಗತಿಸಿದರು.