ಬದಿಯಡ್ಕ: ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಆಹ್ವಾನದ ಮೇರೆಗೆ ಬದಿಯಡ್ಕ ಮಂಡಲ ಕಾಂಗ್ರೆಸ್ ನ ನೇತೃತ್ವದಲ್ಲಿ ರಾಜ್ಯ ಸರ್ಕಾರದ ಜನದ್ರೋಹಿ ನೀತಿಯ ಆಡಳಿತೆಯನ್ನು ಕೊನೆಗಾಣಿಸಬೇಕು, ಮುಖ್ಯಮಂತ್ರಿ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಬದಿಯಡ್ಕ ಪೇಟೆಯಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.
ಡಿಕೆಟಿಎಫ್ ಜಿಲ್ಲಾಧ್ಯಕ್ಷ ವಾಸುದೇವನ್ ನಾಯರ್ ಮಾತನಾಡಿ, ಮುಖ್ಯಮಂತ್ರಿಯವರ ಜನದ್ರೋಹ ಆಡಳಿತೆಯನ್ನು ಕೊನೆಗೊಳಿಸಬೇಕು, ಇಲ್ಲವೇ ರಾಜಿನಾಮೆ ನೀಡಬೇಕು, ದುರಾಡಳಿತವನ್ನು ಕೊನೆಗೊಳಿಸದಿದ್ದಲ್ಲಿ ಪ್ರಬಲ ಪ್ರತಿಭಟನೆಯನ್ನು ಎದುರಿಸಬೇಕಾದೀತು ಎಂಬ ಎಚ್ಚರಿಕೆ ನೀಡಿದರು.
ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮಪ್ರಸಾದ್ ಮಾನ್ಯ, ಹಿರಿಯ ಕಾಂಗ್ರೆಸ್ ನೇತಾರ ಚಂದ್ರಹಾಸ ರೈ, ಕರ್ಷಕ ಕಾಂಗ್ರೆಸ್ ವಿಧಾನಸಭಾ ಮಂಡಲ ಅಧ್ಯಕ್ಷ ತಿರುಪತಿ ಕುಮಾರ್ ಭಟ್, ಬ್ಲಾಕ್ ಕಾಂಗ್ರೆಸ್ ನೇತಾರರಾದ ಖಾದರ್ ಮಾನ್ಯ, ರಾಮ ಪಟ್ಟಾಜೆ, ಶಾಫಿ ಗೋಳಿಯಡ್ಕ, ಮಂಡಲ ಉಪಾಧ್ಯಕ್ಷ ಕೃಷ್ಣದಾಸ್, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶ್ರೀನಾಥ್, ಯುವ ಕಾಂಗ್ರೆಸ್ ಮಂಡಲ ಅಧ್ಯಕ್ಷ ಕೃಷ್ಣ ಕುಮಾರ್, ಮಂಡಲ ನೇತಾರರಾದ ಲೋಹಿತಾಕ್ಷನ್, ಅಬೂಬಕ್ಕರ್ ಬಣ್ಪುತ್ತಡ್ಕ, ರವಿಕುಮಾರ್ ಕುಂಟಾಲುಮೂಲೆ, ಜೋನಿ ಕ್ರಾಸ್ತ ಕಾರ್ಮಾರು, ರಾಮ ಗೋಳಿಯಡ್ಕ, ಸತೀಶ್ ಪೆರುಮುಂಡ, ಖಮರುದ್ದೀನ್, ಜೋಸೆಫ್ ಕ್ರಾಸ್ತ, ನಿಜೀಶ್ ಯಂ, ಉದಯನ್, ಸವಾದ್, ಸದಾಶಿವ ಗೋಳಿಯಡ್ಕ, ಸತೀಶ ಮಾನ್ಯ ಮೊದಲಾದವರು ನೇತೃತ್ವ ನೀಡಿದರು.