ಕಾಸರಗೋಡು: ಮದ್ರಸಾ ಶಿಕ್ಷಣ ವ್ಯವಸ್ಥೆಯ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ವರದಿ, ಅಲ್ಪ ಸಂಖ್ಯಾತರ ಮೇಲಿನ ದಮನ ನೀತಿಗೆ ಸಾಕ್ಷಿಯಾಗಿರುವುದಾಗಿ ಕಾಸರಗೋಡು ಜಿಲ್ಲಾ ದಖನಿ ಮುಸ್ಲಿಮ್ ಅಸೋಸಿಯೇಶನ್ ನೇತಾರರ ಸಭೆಯು ಅಭಿಪ್ರಾಯಪಟ್ಟಿದೆ.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗವು ದೇಶದಲ್ಲಿ ಮದ್ರಸಾ ಶಿಕ್ಷಣ ವ್ಯವಸ್ಥೆಯ ಹಿಂದಿನ ಸಾಚಾರ್ ಸಮಿತಿಯ ಶಿಫಾರಸುಗಳನ್ನು ಸರಿಯಾಗಿ ಅಧ್ಯಯನ ಮಾಡಿಲ್ಲ ಮತ್ತು ತನಿಖೆಯನ್ನೂ ಮಾಡದೆ ಸುಪ್ರೀಂ ಕೋರ್ಟ್‍ನಲ್ಲಿ ವರದಿ ನೀಡಲಾಗಿದ್ದು, ಈ ಬಗ್ಗೆ ಮರುಪರಿಶೀಲಿಸುವಂತೆ ಕೆಡಿಎಂಎ ಲೀಡರ್ಸ್ ಮೀಟ್ ಆಗ್ರಹಿಸಿದೆ.
ನಿವೃತ್ತ ಉಪ ತಹಸೀಲ್ದಾರ್ ಸಲೀಂ ಅಬ್ದುಲ್ಲಾ ಸಾಹಿಬ್ ಸಮಾರಂಭ ಉದ್ಘಾಟಿಸಿದರು. ಹಂಗಾಮಿ ಅಧ್ಯಕ್ಷ ನಿಜಾಮ್ ಮೌವ್ವಾಲ್ ಅಧ್ಯಕ್ಷತೆ ವಹಿಸಿದ್ದರು. ಡಿಎಂಸಿ ರಾಜ್ಯ ಸಮಿತಿ ಕೋಶಾಧಿಕಾರಿ ಶಾಬಾನ್ ಸಾಹಿಬ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಾಸಿಂ ಮಣಿಮುಂಡ, ನಾಸರ್ ಕಾಞಂಗಾಡ್, ಉಪಾಧ್ಯಕ್ಷರಾದ ಅಶ್ರಫ್ ಕೆ.ಎಂ, ಅಶ್ರಫ್ ಸಾಹಿಬ್ ಮೊಗ್ರಾಲ್, ಬಶೀರ್ ಕಾಸರಗೋಡು, ಶರೀಫ್ ಸಾಹಿಬ್, ಶುಕೂರ್ ಮೌವ್ವಲ್ ಉಪಸ್ಥಿತರಿದ್ದರು.
ಈ ಸಂದರ್ಭ ಪ್ಲಸ್ ಟು-ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಹಂಗಾಮಿ ಕಾರ್ಯದರ್ಶಿ ನಾಸರ್ ಚುಳ್ಳಿಕ್ಕರ ಸ್ವಾಗತಿಸಿದರು. ಕೋಶಾಧಿಕಾರಿ ಶೇಖ್ ಮೊಯ್ತೀನ್ ಸಾಹಿಬ್ ವಂದಿಸಿದರು.