ಕಾಸರಗೋಡು : ಜಿಲ್ಲೆಯ ಕಾಸರಗೋಡು ಮೀನುಗಾರಿಕಾ ಬಂದರು ಪಿಎಂಎಸ್‍ವೈ ಯೋಜನೆಗಳ ರಾಷ್ಟ್ರೀಯ ಮಟ್ಟದ ನಿರ್ಮಾಣ ಕಾಮಗಾರಿಗೆ ಪ್ರಧಾನಮಂತ್ರಿ ನರೇಂದ್ರಮೋದಿ ಆನ್‍ಲೈನ್ ಮೂಲಕ ಚಾಲನೆನೀಡಿದರು. ರಾಜ್ಯ ಮೀನುಗಾರಿಕೆ, ಸಂಸ್ಕøತಿ ಮತ್ತು ಯುವಜನ ಖಾತೆ ಸಚಿವ ಸಜಿ ಚೆರಿಯನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ರಾಜೀವ್ ರಂಜನ್ ಸಿಂಗ್ ಮುಖ್ಯ ಭಾಷಣ ಮಾಡಿದರು. ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ರಾಜ್ಯ ಸಚಿವ ಜಾರ್ಜ್ ಕುರಿಯನ್, ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು, ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಾಹಿರ್ ಆಸಿಫ್, ಖಾಲಿದ್ ಪಚ್ಚಕ್ಕಾಡ್, ರಜಿನಿ ಪ್ರಭಾಕರನ್ ಹಾಗೂ ನಗರಸಭಾ ಸದಸ್ಯರಾದ ಅಜಿತ್ ಕುಮಾರ್, ಎಂ.ಉಮಾ. , ವಿವಿಧ ರಾಜಕೀಯಪಕ್ಷದ ಪ್ರತಿನಿಧಿಗಳಾದ ಆರ್.ಗಂಗಾಧರನ್, ಅಂಜು ಜೋಶ್, ಎ.ಅಬ್ದುಲ್ ರಹಮಾನ್, ಅಜೀಜ್ ಕಡಪುರಂ, ಕುರಿಯಾಕೋಸ್ ಪ್ಲಾಪರಂಬಿಲ್, ಮೀನುಗಾರಿಕಾ ನಿರ್ದೇಶಕ ಕೆ.ಎ.ಲಬೀಬ್, ಕಾಸರಗೋಡು ಹಾರ್ಬರ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಸುನೀಲ್ ಸ್ಯಾಮ್ಯುಯೆಲ್ ವಂದಿಸಿದರು. ಶಾಸಕ ಎನ್.ಎ ನೆಲ್ಲಿಕುನ್ನು ಅವರು ನಿರ್ಮಾಣಕಾಮಗಾರಿ ಶಿಲಾಫಲಕವನ್ನು ಶಾಸಕ ಎನ್.ಎ ನೆಲ್ಲಿಕುನ್ನು ಅನಾವರಣಗೊಳಿಸಿದರು.