ಮಂಜೇಶ್ವರ : ಕಡಂಬಾರಿನಲ್ಲಿ ಮನೆಯ ಸ್ನಾನಗೃಹದಲ್ಲಿ ನೀರಿದ್ದ ಬಕೆಟ್‍ಗೆ ಬಿದ್ದು, ಒಂದುವರ್ಷ ಎರಡು ತಿಂಗಳು ಪ್ರಾಯದ ಹೆಣ್ಣುಮಗು ದಾರುಣವಾಗಿ ಮೃತಪಟ್ಟಿದೆ. ಕಡಂಬಾರ್ ನಿವಾಸಿ ಹಾರಿಸ್-ಕೈರುನ್ನೀಸಾ ದಂಪತಿ ಪುತ್ರಿ ಫಾತಿಮಾ ಮೃತಪಟ್ಟ ಬಾಲಕಿ.
ಮಕ್ಕಳೊಂದಿಗೆ ಆಟವಾಡಲು ನೆರೆಮನೆಗೆ ತೆರಳಿದ್ದ ಫಾತಿಮಾ, ನಂತರ ಒಂಟಿಯಾಗಿ ತನ್ನ ಮನೆಗೆ ವಾಪಸಾದ ಬಳಿಕ ಮನೆಯೊಳಗಿನ ಸ್ನಾನಗೃಹಕ್ಕೆ ತೆರಳಿ ನೀರಿದ್ದ ಬಕೆಟ್‍ನಲ್ಲಿ ಆಟವಾಡತೊಡಗಿತ್ತು. ಮನೆಯವರು ವರಾಂಡದಲ್ಲಿ ಕುಳಿತು ಮಾತನಾಡುತ್ತಿದ್ದು, ಅಲ್ಪ ಹೊತ್ತಿನಲ್ಲಿ ಮಗುವಿನ ನೆನಪಾಗಿ ಒಳಗೆ ತೆರಳಿದಾಗ ಬಕೆಟ್‍ನೊಳಗೆ ನೀರಿನಲ್ಲಿ ಮುಳುಗಿದ್ದ ಸಥಿತಿಯಲ್ಲಿ ಮಗು ಪತ್ತೆಯಾಗಿತ್ತು. ತಕ್ಷಣ ನೀರಿಂದ ತೆಗೆದು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಮಗುವಿನ ಅಸಹಜ ಸಾವಿನ ಬಗ್ಗೆ ಮಂಜೇಶ್ವರ ಠಾನೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.