ಸಮರಸ ಚಿತ್ರಸುದ್ದಿ: ಮಂಜೇಶ್ವರ: ವರ್ಕಾಡಿ ಸುಂಕದಕಟ್ಟೆ ಶ್ರೀ ದುರ್ಗಾಪರಮೇಶ್ವರೀ ಭಜನಾಮಂದಿರ ಭಜನಾ ಮಂದಿರ (ರಿ) ವರ್ಕಾಡಿ ಸುಂಕದಕಟ್ಟೆ ಇದರ ಶ್ರೀ ಗಣಪತಿ ವಿಗ್ರಹದ ವಿಸರ್ಜನಾ ಮೆರವಣಿಗೆ ಸಂದರ್ಭ ಹುಲಿವೇಷ(1) ಹಾಗೂ ವಿವಿಧ ಶಬ್ದ ಚಿತ್ರ(2)ಗಳು ಗಮನ ಸೆಳೆಯಿತು. ಮಂದಿರದಿಂದ ಹೊರಟ ಘೋಷಯಾತ್ರೆ ಮುರತ್ತಣೆ ಸುಂಕದಕಟ್ಟೆ ಮಜೀರ್ಪಳ್ಳ ದಾರಿಯಾಗಿ ಕೋಳ್ಯೂರು ಶ್ರೀ ಶಂಕರನಾರಾಯಣ ದೇವರ ಕೆರೆಯಲ್ಲಿ ವಿಗ್ರಹದ ವಿಸರ್ಜನೆ ನಡೆಸಲಾಯಿತು.