HEALTH TIPS

ಮಲಬದ್ಧತೆಯಿಂದ ಪಾರು ಮಾಡುವ ಚಿಂಚಾಪಾನಕ: ತಯಾರಿಸುವುದು ಹೇಗೆ?

 ದೇಹದ ಉಷ್ಣಾಂಶ ಹೆಚ್ಚಿಸುವ ಆಹಾರಗಳನ್ನು ಸೇವಿಸಿದಾಗ ಕೆಲವೊಮ್ಮೆ ಮಲಬದ್ಧತೆ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಹೊರಗಿನ ಬಿಸಿಲು ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರಿದರೂ ಅಚ್ಚರಿಯಿಲ್ಲ. ಕೆಲವು ಆಹಾರ ಪದಾರ್ಥಗಳು ನಾಲಿಗೆಗೆ ರುಚಿಯಾಗಿದ್ದರೂ ದೇಹಕ್ಕೆ ಒಗ್ಗುವುದಿಲ್ಲ ಹೀಗಾಗಿ ಅವುಗಳನ್ನು ಸೇವಿಸಿದ ಬಳಿಕ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು.

ಕೆಲವೊಂದು ಆಹಾರ ಪದಾರ್ಥಗಳನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಸೇವಿಸಿ ಬಿಡುತ್ತೇವೆ ಆ ನಂತರ ಪರದಾಡುತ್ತೇವೆ.

ಮಾಂಸಹಾರವಿರಲಿ, ಸಸ್ಯಹಾರವೇ ಆಗಿರಲಿ ನಾವು ಸೇವಿಸುವ ತರಕಾರಿ ಸೇರಿದಂತೆ ಆಹಾರ ಪದಾರ್ಥಗಳು ತನ್ನದೇ ಆದ ಗುಣಗಳನ್ನು ಹೊಂದಿರುತ್ತವೆ. ಕೆಲವರಿಗೆ ಕೆಲವೊಂದು ಆಹಾರ ಪದಾರ್ಥಗಳು ಶರೀರಕ್ಕೆ ಹೊಂದದೆ ಇರಬಹುದು. ಆದರೆ ಅನಿವಾರ್ಯವಾಗಿ ಸೇವಿಸಿ ಬಿಟ್ಟಿರುತ್ತೇವೆ. ಬಳಿಕ ದೇಹದಲ್ಲಿ ಉಷ್ಣತೆ ಹೆಚ್ಚಿ ಮಲಬದ್ಧತೆ ಸಮಸ್ಯೆಗೂ ದಾರಿ ಮಾಡಿಕೊಟ್ಟು ಬಿಡುತ್ತೇವೆ. ಇಂತಹ ಸಂದರ್ಭಗಳಲ್ಲಿ ದೇಹವನ್ನು ತಂಪಾಗಿಟ್ಟು, ಮಲಬದ್ಧತೆಯ ಸಮಸ್ಯೆಯಿಂದ ದೂರ ಮಾಡಲು ಇರುವ ಒಂದೇ ಮಾರ್ಗವೆಂದರೆ ಅದು ಚಿಂಚಾಪಾನಕದ ಮೊರೆ ಹೋಗುವುದು.

ಇಷ್ಟಕ್ಕೂ ಏನಿದು ಚಿಂಚಾಪಾನಕ ಎಂಬ ಅಚ್ಚರಿ ಮೂಡದಿರದು. ಬೇಸಿಗೆಯ ಸಮಯದಲ್ಲಿ ದೇಹದ ಉಷ್ಣಾಂಶ ತಗ್ಗಿಸುವ ಈ ಪಾನಕ ಸರ್ವ ಕಾಲದಲ್ಲಿಯೂ ಉಪಯೋಗಕ್ಕೆ ಬರುತ್ತದೆ. ಇದನ್ನು ತಯಾರು ಮಾಡಿರುವುದು ಆಯುಷ್ ಇಲಾಖೆ. ಈ ಪಾನಕವನ್ನು ಮನೆಯಲ್ಲಿಯೇ ಸುಲಭವಾಗಿ ತಯಾರು ಮಾಡಲು ಸಾಧ್ಯವಿರುವುದರಿಂದ ಎಲ್ಲರೂ ತಯಾರು ಮಾಡಿ ಸೇವಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದರೆ ತಪ್ಪಾಗಲಾರದು.

ಜೀರ್ಣಶಕ್ತಿ ಹೆಚ್ಚಿಸಲು ರಾಮಬಾಣ

ಬೇಸಿಗೆಯ ದಿನಗಳಲ್ಲಿ ಈ ಪಾನಕ ಹೆಚ್ಚು ಪ್ರಯೋಜನಕ್ಕೆ ಬಂದಿತ್ತು. ಆದರೆ ಇದರಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುವ ಶಕ್ತಿಯಿರುವ ಕಾರಣದಿಂದಾಗಿ ಮಲಬದ್ಧತೆ ಇರುವವರು ಇದನ್ನು ಸೇವಿಸುವುದರಿಂದ ಬಹುಶಃ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಗಲಿದೆ. ಇಷ್ಟಕ್ಕೂ ಈ ಚಿಂಚಾಪಾನಕ ತಯಾರಿಸಲು ಹೆಚ್ಚೇನು ಕಷ್ಟವಿಲ್ಲ. ಜತೆಗೆ ಮನೆಯಲ್ಲಿರುವ ಪದಾರ್ಥಗಳಿಂದಲೇ ಇದನ್ನು ತಯಾರಿಸಬಹುದಾಗಿದೆ. ಇದನ್ನು ಹೇಗೆ ತಯಾರಿಸಬೇಕು ಎಂಬುದನ್ನು ಆಯುಷ್ ಇಲಾಖೆ ಅದರಂತೆ ತಯಾರಿಸಬಹುದಾಗಿದೆ.

ಹುಣಸೆಹಣ್ಣು, ಬೆಲ್ಲದ ಪುಡಿ, ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಸೈಂದವ ಲವಣವಿದ್ದರೆ ಸಾಕು ಚಿಂಚಾ ಪಾನಕ ತಯಾರು ಮಾಡಬಹುದಾಗಿದೆ. ಜತೆಗೆ ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಮಲಬದ್ಧತೆ ನಿವಾರಿಸುತ್ತದೆ, ಶರೀರದ ದಾಹ ಹಾಗೂ ಬಾಯಾರಿಕೆಯನ್ನು ನೀಗಿಸುತ್ತದೆ. ಚಿಂಚಾಪಾನಕ ತಯಾರು ಮಾಡಲು ಏನೆಲ್ಲ ಪದಾರ್ಥಗಳು ಬೇಕು? ಮತ್ತು ಹೇಗೆ ತಯಾರಿಸಬಹುದು ಎಂಬುದರ ವಿವರ ಇಲ್ಲಿದೆ.

ಚಿಂಚಾಪಾನಕ ತಯಾರು ಮಾಡುವುದು ಹೇಗೆ?

ಹುಣಸೆ ಹಣ್ಣನ್ನು ಅಗತ್ಯ ಪ್ರಮಾಣದ ನೀರಿನಲ್ಲಿ ರಾತ್ರಿಯಿಡೀ ನೆನೆಸಿಟ್ಟು ಮರುದಿನ ಬೆಳಿಗ್ಗೆ ಅದನ್ನು ಶುದ್ಧವಾದ ಕೈಗಳಿಂದ ಚೆನ್ನಾಗಿ ಹಿಸುಕಿ ಸೋಸಿಕೊಳ್ಳಬೇಕು (ಗಾಡವಾದ ಹುಣಸೆ ಮಿಶ್ರಣ ಬಾಟಲಿಗಳಲ್ಲಿ ತುಂಬಿಸಿಕೊಂಡು ಪಾನಕ ತಯಾರಿಸುವಾಗ ಬೇಕಾದಷ್ಟನ್ನು ಬಳಸಿಕೊಳ್ಳಬಹುದು). ಅಗತ್ಯ ಪ್ರಮಾಣದಷ್ಟು ನೀರನ್ನು ಪಾತ್ರೆಗೆ ಹಾಕಿಕೊಳ್ಳಿ. ಅಷ್ಟೇ ಪ್ರಮಾಣದಷ್ಟು ಹುಣಸೆ ಹಣ್ಣಿನ ಮಿಶ್ರಣವನ್ನು ಆ ನೀರಿನ ಪಾತ್ರೆಗೆ ಹಾಕಬೇಕು. ಇದಾದ ನಂತರ ಬೆಲ್ಲದ ಪುಡಿಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕರಗಿಸಿ ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಸೈಂದವ ಲವಣವನ್ನು ಸೇರಿಸಿದರೆ ಚಿಂಚಾಪಾನಕ ರೆಡಿಯಾಗುತ್ತದೆ.

ಮೊದಲ ಬಾರಿಗೆ ಮಾಡುವಾಗ ಯಾವುದು ಎಷ್ಟು ಪ್ರಮಾಣದಲ್ಲಿ ಇರಬೇಕು ಎಂಬ ಅಂದಾಜು ಸಿಗದೆ ತೊಂದರೆಯಾಗಬಹುದು ಹೀಗಾಗಿ ಚಿಂಚಾ ಪಾನಕವನ್ನು ತಯಾರಿಸುವಾಗ ಹುಣಸೆಹಣ್ಣು - 100 ಗ್ರಾಂ, ಬೆಲ್ಲದ ಪುಡಿ - 400 ಮಿಲಿ, ಜೀರಿಗೆ ಪುಡಿ - 10 ಗ್ರಾಂ, ಕಾಳು ಮೆಣಸಿನಪುಡಿ - 5 ಗ್ರಾಂ, ಸೈಂದವ ಲವಣ - 5 ಗ್ರಾಂ ಹಾಕಿ ತಯಾರು ಮಾಡಿಕೊಳ್ಳಬೇಕು. ಇದನ್ನು 50 ರಿಂದ 100 ಮಿಲಿ ಸೇವನೆ ಮಾಡುವುದು ಒಳ್ಳೆಯದು. ಚಿಂಚಾಪಾನಕ ತಯಾರು ಮಾಡಿಟ್ಟುಕೊಂಡು ಸೇವಿಸಿದರೆ ಆರೋಗ್ಯ ವೃದ್ಧಿಗೆ ಇದು ಸಹಕಾರಿ ಆಗಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries