ಮಂಜೇಶ್ವರ: ಕೇಂದ್ರ ಭದ್ರ ಹಾಗೂ ಸರ್ವಸ್ಪರ್ಶಿ ಆಡಳಿತ ನೀಡುತ್ತಿರುವಾಗ ಇಂಡಿ ಒಕ್ಕೂಟದ ರಾಜ್ಯಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಆರೋಪಿಸಿದ್ದಾರೆ.
ನಿನ್ನೆ ವರ್ಕಾಡಿಯಲ್ಲಿ ನಡೆದ ಬಿಜೆಪಿ ಮಂಜೇಶ್ವರ ಮಂಡಲ ಸದಸ್ಯತ್ವ ಅಭಿಯಾನ ಹಾಗೂ ಪಂಡಿತ್ ದೀನ್ ದಯಾಳ್ ಜನ್ಮ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೆಹಲಿ, ಕರ್ನಾಟಕ, ತಮಿಳ್ನಾಡುಗಳಂತೆಯೇ ಕೇರಳದಲ್ಲೂ ಭ್ರಷ್ಟಾಚಾರ, ಹಿಂದೂ ವಿರೋಧಿ ನೀತಿ, ಓಲೈಕೆ ರಾಜಕಾರಣ ನಡೆಯುತ್ತಿದೆ. ಕೇರಳದಲ್ಲಿ ಪ್ರಳಯ ಬಂದರೂ, ಪ್ರಾಕೃತಿಕ ವಿಕೋಪ ಉಂಟಾದರು ರಾಜ್ಯ ಸರ್ಕಾರ ಅದರ ಹೆಸರಲ್ಲಿ ಲಾಭ ಗಳಿಸುವ ಕುತ್ಸಿತ ಮನೋಸ್ಥಿತಿ ಹೊಂದಿದೆ ಎಂದವರು ಟೀಕಿಸಿದರು. ಕೇರಳ ಎಡರಂಗಕ್ಕೆ ಆರ್ಥಿಕ ಬೆಳವಣಿಗೆಗೆ ಇರುವ ಏಕೈಕ ರಾಜ್ಯ. ಇಲ್ಲಿಯ ಭ್ರಷ್ಟಾಚಾರ ಶೀಘ್ರ ಹೊರಬರಲಿದೆ ಎಂದು ಅವರು ಹೇಳಿದರು.
ಕೇಂದ್ರ ಜಾರಿಗೆ ತಂದಿರುವ ಆಯುಷ್ಮಾನ್ ಅರೋಗ್ಯ ಯೋಜನೆ ಸಮಗ್ರ ಜಾರಿ ಮಾಡದೇ ರಾಜ್ಯ ಸರ್ಕಾರ ಬಡವರನ್ನು ವಂಚಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಜಿಲ್ಲಾ ಪ್ರ ಕಾರ್ಯದರ್ಶಿವಿಜಯ್ ರೈ, ಕಾರ್ಯದರ್ಶಿ ಮಣಿಕಂಠ ರೈ, ಮುಖಂಡರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಹರಿಶ್ಚಂದ್ರ ಎಂ, ದೂಮಪ್ಪ ಶೆಟ್ಟಿ, ಪದ್ಮಾವತಿ, ತುಳಸಿ ಕುಮಾರಿ, ಗೋಪಾಲ್ ಶೆಟ್ಟಿ, ಲೋಕೇಶ್ ನೋಂಡ, ಯಾದವ ಬಡಾಜೆ, ರಕ್ಷಣ ಅಡಕಳ, ರವಿರಾಜ್, ಯತೀರಾಜ್ ಶೆಟ್ಟಿ, ಭಾಸ್ಕರ್ ಪೊಯ್ಯೆ, ಚಂದ್ರಹಾಸ ಪೂಜಾರಿ ಜನಪ್ರತಿನಿಧಿನಗಳು ಮೊದಲಾದವರು ಉಪಸ್ಥಿತರಿದ್ದರು.