HEALTH TIPS

ಕೃಷಿಕರದ್ದು ಸ್ವಾವಲಂಬಿ ಬದುಕು- ಪತ್ರಕರ್ತ ವಿರಾಜ್ ಅಡೂರು

ಕಾಸರಗೋಡು : 'ಯಾವುದೇ ಅಧಿಕಾರಯುತ ಉದ್ಯೋಗವಿದ್ದರೂ, ವ್ಯಕ್ತಿಯ ಹಸಿವು ನೀಗಿಸಲು ಕೃಷಿಯನ್ನೇ ಅವಲಂಬಿಸಬೇಕು. ಕೃಷಿಕರದ್ದು ಸ್ವಾವಲಂಬಿ ಬದುಕು. ಆಹಾರ ವಸ್ತುಗಳನ್ನು ಸ್ವತ: ಬೆಳೆಸಿ, ಬಳಸಿ, ಮಿಕ್ಕಿದ್ದನ್ನು ಸಮಾಜಕ್ಕೆ ನೀಡುವ ಕೃಷಿಕರ ಜೀವನ ಸಾರ್ಥಕ' ಎಂದು ಪತ್ರಕರ್ತ, ಸಾಹಿತಿ ವಿರಾಜ್ ಅಡೂರು ಹೇಳಿದರು.

ಅವರು ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನ ಗ್ರಂಥಾಲಯದಲ್ಲಿ ನಡೆದ ಕೇರಳ-ಕರ್ನಾಟಕ ಸ್ಪಂದನ ಸಿರಿ ವೇದಿಕೆಯ ಆಶ್ರಯದಲ್ಲಿ ಕನ್ನಡ ಭವನ ಮತ್ತು ಗ್ರಂಥಾಲಯ ಹಾಗೂ ಕಾಸರಗೋಡಿನ ವಿಸ್ಡಮ್ ಇನ್ಟಿಟ್ಯೂಶನ್ ನೆಟ್ವರ್ಕ್ ಸಂಸ್ಥೆಯ ಸಹಕಾರದಲ್ಲಿ ನಡೆದ ಕೇರಳ-ಕರ್ನಾಟಕ ಸ್ಪಂದನ ಸಿರಿ ಕೃಷಿ, ಕನ್ನಡ ಶಿಕ್ಷಣ ಮತ್ತು ಸಂಸ್ಕøತಿ ಸಮ್ಮೇಳನದ ಕೃಷಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 'ಕೃಷಿಯು ನಿರ್ಲಕ್ಷಿಸುವಂತಹಾ ವಿಭಾಗವಲ್ಲ. ಮಕ್ಕಳು ಹಾಗೂ ಯುವಜನಾಂಗದಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸಬೇಕು. ದೇಶದ ಜನಸಂಖ್ಯೆಗೆ ಅನುಗುಣವಾಗಿ ಆಹಾರದ ಉತ್ಪಾದನೆಯೂ ಆಗಬೇಕು. ಆಗ ದೇಶದ ಪ್ರಗತಿ ಸುಲಭ. ಕೃಷಿಕರ ಉತ್ತೇಜನಕ್ಕಾಗಿ ಗ್ರಾಹಕರು, ನೇರವಾಗಿ ಕೃಷಿಕರಿಂದಲೇ ವಸ್ತುಗಳನ್ನು ಖರೀದಿಸಬೇಕು' ಎಂದು ಅವರು ಹೇಳಿದರು.

ಸಭೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ವಿ ಬಿ ಕುಳಮರ್ವ ಉಪಸ್ಥಿತರಿದ್ದರು. ಕೃಷಿ ಕವಿಗೋಷ್ಠಿಯಲ್ಲಿ ಕೆ. ನರಸಿಂಹ ಭಟ್ ಏತಡ್ಕ, ಸೌಮ್ಯ ಗುರು ಕಾರ್ಲೆ, ಹಿತೇಶ್ ಕುಮಾರ ನೀರ್ಚಾಲು, ರಾಧಾ ಮೋಹನ್ ಕುಮಾರ, ಆನಂದ ರೈ ಅಡ್ಕಸ್ಥಳ, ಡಾ. ವಾಣಿಶ್ರೀ ಕಾಸರಗೋಡು, ಪುಂಡೂರು ಪ್ರಭಾವತಿ ಕೆದಿಲಾಯ, ವಿಜಯರಾಜ ಪುಣಿಂಚಿತ್ತಾಯ, ರೇಖಾ ಸುದೇಶ್ ರಾವ್, ಚಿತ್ರಕಲಾ ದೇವರಾಜ ಆಚಾರ್ಯ, ಗಿರೀಶ್ ಪಿ ಎಂ ಚಿತ್ತಾರಿ, ಜ್ಯೋತ್ಸ್ನಾ ಕಡಂದೇಲು, ಪದ್ಮಾವತಿ ಹಾಸನ, ಅನ್ನಪೂರ್ಣ ಎನ್ ಕುತ್ತಾಜೆ, ದೇವರಾಜ ಆಚಾರ್ಯ ಕುಂಬಳೆ, ರಮ್ಯಾ ಮೂರ್ನಾಡು, ಸುಧಾ, ಪದ್ಮಾವತಿ, ವಿಜಯ ಸುಬ್ರಹ್ಮಣ್ಯ, ಗುರುರಾಜ್ ಎಂ ಆರ್ ಕಾಸರಗೋಡು ಭಾಗವಹಿಸಿದ್ದರು. ಸುಧಾ ತುಮಕೂರು ವಂದಿಸಿದರು. ಗಿರಿಜಾ ಹಾಸನ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries