ಬದಿಯಡ್ಕ: ಮಾನಸಿಕ ವೈಕಲ್ಯದಿಂದ ಬಳಲುತ್ತಿರುವ ಮಕ್ಕಳಿಗಾಗಿ ಕಾರ್ಯಾಚರಿಸುತ್ತಿರುವ ಕಾರ್ಮೆಲ್ ಸ್ಪೆಷಲ್ ಶಾಲೆಯ ಹೊಸದಾಗಿ ನಿರ್ಮಿಸಿದ ಶಾಲಾ ದ್ವಾರದ ಉದ್ಘಾಟನೆಯನ್ನು ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾದರ್ ಬದ್ರಿಯಾ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಸಿಎಂಸಿ ಸೇಂಟ್ ಜೋಸೆಫ್ ಪ್ರಾಂತ್ಯದ ಸುಪೀರಿಯರ್ ಮದರ್ ಲಿಟಲ್ ತೆರೇಸ್ ಅವರು ಮಲ್ಟಿ ಸೆನ್ಸರಿ ಕೊಠಡಿಯನ್ನು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿ.ಸೌಮ್ಯ ಆಂಟನಿ ಸಿ.ಎಂ.ಸಿ, ಪಿ.ಟಿ.ಎ ಅಧ್ಯಕ್ಷ ಗೋಪಾಲ ಡಿ, ಮಾತೃ ಸಮಿತಿ ಅಧ್ಯಕ್ಷೆ ಶಮೀಮಾ ಮುಂತಾದವರು ಮಾತನಾಡಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.