ಪೆರ್ಲ: ಸತ್ಯನಾರಾಯಣ ಎಎಲ್ ಪಿ ಶಾಲೆಯ ನಾಲ್ಕನೇ ತರಗತಿಯನ್ನು ಅತ್ಯಾಧುನಿಕ ಸೌಲಭ್ಯದ ಪಠ್ಯ ಕೊಠಡಿಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಇಲ್ಲಿನ ಕ್ಲಾಸ್ ರಕ್ಷಕ ಶಿಕ್ಷಕ ಸಂಘದ ನೇತೃತ್ವದಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ನಿರ್ಮಿಸಿ ಉದ್ಘಾಟಿಸಲಾಯಿತು. ಸುಮಾರು 90 ಸಾವಿರ ರೂ ವೆಚ್ಚದಲ್ಲಿ ನಿರ್ಮಿಸಿದ ಸ್ಮಾರ್ಟ್ ತರಗತಿಯ ವ್ಯವಸ್ಥೆ ಎಲ್ ಪಿ.ಮಟ್ಟದಲ್ಲಿ ಜಿಲ್ಲೆಯಲ್ಲಿಯೇ ಪ್ರಥಮತಃ ಚಾಲನೆಗೆ ಬಂದಿದೆ ಎಂದು ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದ ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ್ ಎಂ.ತಿಳಿಸಿದರು. ನಾಲ್ಕನೇ ತರಗತಿಯ ರಕ್ಷಕರು ತಾವೇ ಸ್ವತಃ ಖರ್ಚು ವೆಚ್ಚ ಭರಿಸಿ ಶಾಲಾ ಮುಖ್ಯೋಪಾಧ್ಯಾಯರ ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ ಭವಿಷ್ಯದ ಮಕ್ಕಳಿಗೆ ಇದನ್ನು ಕೊಡುಗೆಯಾಗಿಸಿರುವುದು ಮಾದರಿಯಾಗಿದೆ ಎಂದು ಅವರು ಶ್ಲಾಘಿಸಿದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಜ್ಯೋತಿ ಲಕ್ಷ್ಮಿ ಕಾಕುಂಜೆ ಸಭೆಯ ಅಧ್ಯಕ್ಷತೆವಹಿಸಿದ್ದರು.ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಸ.ನಾ.ಫ್ರೌಢ ಶಾಲಾ ಮುಖ್ಯೋಪಾಧ್ಯಾಯ ಕೇಶವ ಪ್ರಕಾಶ್ ಎನ್, ಆಡಳಿತ ಸಮಿತಿ ಉಪಾಧ್ಯಕ್ಷ ಸದಾಶಿವ ಭಟ್ ಹರಿನಿಲಯ, ಕಾರ್ಯಕ್ರಮ ಸಮಿತಿ ಅಧ್ಯಕ್ಷ ರಮೇಶ್ಚಂದ್ರ ರೈ ನಡುಬೈಲ್, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರವಿಚಂದ್ರ ಸೂರ್ಡೇಲು, ಕ್ಲಾಸ್ ಪಿಟಿಎ ಅಧ್ಯಕ್ಷರುಗಳಾದ ಸುನಂದ ರೈ ಪೆರ್ಲ, ರಾಮಣ್ಣ ನಾಯ್ಕ್ ಬಜಕೂಡ್ಲು, ಶಾಲಾ ನಾಯಕಿ ದಿಯ ಸಭೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್ ಕೋಟೆ ಸ್ವಾಗತಿಸಿ, ಶಿಕ್ಷಕ ಉದಯ ಸಾರಂಗ್ ವಂದಿಸಿದರು. ಬೀವಿ ಟೀಚರ್ ನಿರೂಪಿಸಿದರು.