ತಿರುವನಂತಪುರಂ: ಮೃಗಾಲಯದ ಅಧಿಕಾರಿಗಳಿಗೆ ತೀವ್ರ ಸಮಸ್ಯೆಗೆ ಕಾರಣವಾದ ಹನುಮಾನ್ ಕೋತಿ ಮೃಗಾಲಯ ಜಿಗಿದು ಒಂದು ವರ್ಷದ ಹಿಂದಿನ ಘಟನೆ. ಮೃಗಾಲಯದ ಅಧಿಕಾರಿಗಳನ್ನು ಕಂಗಾಲಾಗಿಸಿದ ಹನುಮಾನ್ ಕೋತಿಗೆ ಇದೀಗ ಸ್ವಾತಂತ್ರ್ಯ ನೀಡಲಾಗಿದೆ. .
ಬಹಳ ಶ್ರಮದ ಕಾರ್ಯಾಚರಣೆ ಬಳಿಕ ಕೋತಿಯನ್ನು ಮತ್ತೆ ಹಿಡಿಯಲಾಯಿತು. ಆ ಬಳಿಕ, ಕೋತಿಯನ್ನು ಒಂದು ವರ್ಷ ಪಂಜರದಲ್ಲಿ ಇರಿಸಲಾಗಿತ್ತು. ಆದರೆ ಹನುಮಾನ್ ಕೋತಿಗೆ ಮತ್ತೆ ಹೊರ ಪ್ರಪಂಚ ನೋಡುವ ಅವಕಾಶ ಇದೀಗ ಲಭಿಸಿದೆ.
ಈ ಬಾರಿ ಗೋಡೆ ಜಿಗಿಯದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿದ್ದಾರೆ.ಮೃಗಾಲಯದ ಆವರಣದೊಳಗೆ ಮುಕ್ತವಾಗಿ ಜಿಗಿದಾಡಲು ತರಬೇತಿ ನೀಡಿ ಹೊರಬಿಡಲಾಗಿದೆ. ತಿರುಪತಿಯಿಂದ ತಂದಿದ್ದ ಹನುಮಾನ್ ಕೋತಿಗೆ ಇದೀಗ ಓಣಂ ವೇಳೆ ಈ ಮೂಲಕ ಪೆರೋಲ್ ನೀಡಲಾಗಿದೆ. ಕೊಂಬೆಯಿಂದ ಕೊಂಬೆಗೆ ಜಿಗಿದು ಬಹುಕಾಲದ ನಂತರ ಸಿಕ್ಕ ಸ್ವಾತಂತ್ರ್ಯದ ಸಂಭ್ರಮದಲ್ಲಿದೆ ಹನುಮಾನ್ ಕೋತಿ.
ಓಣ ರಜೆಯಾಗಿರುವುದರಿಂದ ಹನುಮಾನ್ ಕೋತಿಯನ್ನು ವೀಕ್ಷಿಸಲು ಮಕ್ಕಳು,ಹಿರಿಯರು ಎನ್ನದೆ ಪ್ರೇಕ್ಷಕರು ನೆರೆದಿದ್ದರು. ಹನುಮಾನ್ ಮಂಗಗಳು ಹೆಚ್ಚಾಗಿ ಗೋವಾ, ಕರ್ನಾಟಕ ಮತ್ತು ಕೇರಳದಂತಹ ರಾಜ್ಯಗಳ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಕಂಡುಬರುತ್ತವೆ. ಕೇರಳದ ಸೈಲೆಂಟ್ ವ್ಯಾಲಿ ಅವರ ಮುಖ್ಯ ಆವಾಸಸ್ಥಾನವಾಗಿದೆ. ಹನುಮಾನ್ ಕೋತಿಗಳು ಆಹಾರ ಮತ್ತು ನೀರಿಲ್ಲದೆ ಎರಡು ದಿನಗಳವರೆಗೆ ಬದುಕಬಲ್ಲ ಜೀವಿಗಳಾಗಿವೆ.