ಕುಂಬಳೆ: ಮುಹಿಮ್ಮತ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅಧ್ಯಾಪಕ ದಿನಾಚರಣೆಯಂದು ಮಾತೃಭೂಮಿ ಸೀಡ್ ಕ್ಲಬ್ ನೀಡಿದ ತರಕಾರಿ ಬೀಜಗಳನ್ನು ಶಾಲಾ ಪ್ರಧಾನ ಅಧ್ಯಾಪಕ ಅಬ್ದುಲ್ ಖಾದರ್ ಅವರು ಚೋಕ್ ಹಿಡಿಯುವ ಕೈಗಳು ಗಿಡಗಳನ್ನು ಕೂಡಾ ಬೆಳೆಸುತ್ತವೆ ಎಂಬ ಸಂದೇಶದೊಂದಿಗೆ ಅಧ್ಯಾಪಕರಾದ ರಾಜೀವನ್ ಮಾಸ್ತರ್ ಅವರಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ರೂಪೇಶ್ ಎಂ.ಟಿ, ಸಿಬ್ಬಂದಿ ಕಾರ್ಯದರ್ಶಿ ರೇಷ್ಮಾ, ಹೈಯರ್ ಸೆಕೆಂಡರಿ ಅಧ್ಯಾಪಕರಾದ ಉಮ್ಮರ್, ನುಸೈಬಾ ಮೊದಲಾದವರು ಉಪಸ್ಥಿತರಿದ್ದರು.