HEALTH TIPS

ಚತುರ್ವೇದ ಜ್ಞಾನ ಮಹಾಯಜ್ಞ ಯಶಸ್ಸಿಗಾಗಿ ಸಂಘಟನಾ ಸಮಿತಿ ರಚನಾ ಸಭೆ, ವೆಬ್‍ಸೈಟ್ ಲೋಕಾರ್ಪಣೆ

ಕಾಸರಗೋಡು: ವಿಶ್ವ ಜ್ಞಾನ ಸಂಘ ಟ್ರಸ್ಟ್ ನೇತೃತ್ವದಲ್ಲಿ ವಿಶ್ವದಲ್ಲಿಯೇ ಮೊದಲಬಾರಿಗೆ ಕಾಸರಗೋಡು ಚೌಕಿ ಕಾವುಗೋಳಿ ಶ್ರೀ ಶಿವ ದೇವಾಲಯ ವಠಾರದಲ್ಲಿ  ಚತುರ್ವೇದ ಜ್ಞಾನ ಮಹಾಯಜ್ಞ ಹತ್ತು ದಿನಗಳ ಕಾಲ ನಡೆಯಲಿದೆ.

2025 ರ ಜನವರಿ 2 ರಿಂದ 11ರವರೆಗೆ ನಡೆಯಲಿರುವ ಮಹಾ ಯಜ್ಞದ ಸುಗಮ ನಿರ್ವಹಣೆಗಾಗಿ ಸಂಘಟನಾ ಸಮಿತಿ ರಚನಾ ಸಭೆಯು   ಕಾಸರಗೋಡು ನಗರಸಭಾಂಗಣದಲ್ಲಿ ನಡೆಯಿತು.

ಕೇರಳದ ವಿವಿಧ ಜಿಲ್ಲೆಗಳ ವಿವಿಧ ಸಮುದಾಯ ಸಂಘಟನೆಗಳು, ದೇವಸ್ಥಾನ, ದೈವಸ್ಥಾನ, ತರವಾಡು ಮತ್ತು ವಿವಿಧ ಟ್ರಸ್ಟಿಗಳು, ತಂತ್ರಿ ವೈದಿಕರು ಮತ್ತು ಅನೇಕ ಭಕ್ತರ ಸಮ್ಮುಖದಲ್ಲಿ 1001 ಜನರ ಸಮಿತಿಯನ್ನು ಘೋಷಿಸಲಾಯಿತು. ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಚಿನ್ಮಯ ಮಿಷನ್ ಕೇರಳದ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ಅವರು ಮಹಾಯಜ್ಞದ ವೆಬ್‍ಸೈಟನ್ನು ಲೋಕಾರ್ಪಣೆಗೈದರು. ಜನಂ ಟಿವಿ ನಿರ್ದೇಶಕ ಜಿ.ಕೆ.ಸುರೇಶ್ ಬಾಬು ಮತ್ತು ಸ್ವಾಗತ ಸಮಿತಿ ನಿಯುಕ್ತ ಅಧ್ಯಕ್ಷ ವಿಜಯನ್ ಕರಿಪ್ಪೊಡಿ, ಆರೆಸ್ಸೆಸ್ ಕುಟುಂಬ ಪ್ರಬೋಧನ್ ರಾಷ್ಟ್ರೀಯ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಹಿಂದೂ ಐಕ್ಯವೇದಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಪಿ.ಹರಿದಾಸ್, ನೀಲೇಶ್ವರಂ ಕೋವಿಲಕಂ ಮನವರ್ಮ, ಎರಿಯಕೋಟ ಕಯಗಂ ಚಂದ್ರಶೇಖರ ಕಾರ್ನವರ್,  ರಘುನಾಥ ಚೈತನ್ಯ, ಬ್ರಹ್ಮಶ್ರೀ ರವೀಶ ತಂತ್ರಿ, ಬ್ರಹ್ಮಶ್ರೀ ಲಕ್ಷ್ಮೀನಾರಾಯಣ ಪಟ್ಟೇರಿ, ಶಶಿಧರ ಐಎಎಸ್, ಗಣೇಶ ಅರಮಂಗಾನಂ, ಉಮೇಶ ಕಡಪ್ಪುರ,  ಸುರೇಶ ಬಾಬು ಕಾನತ್ತೂರು, ಗಣೇಶ ಮಾವಿನಕಟ್ಟೆ ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅಧ್ಯಕ್ಷರಾಗಿ  ವಿಜಯನ್ ರಾಮನ್, ಪ್ರಧಾನ ಕಾರ್ಯದರ್ಶಿಯಾಗಿ  ಜಯಚಂದ್ರನ್ ಓಕೆ, ಸಂಘಟನಾ ಕಾರ್ಯದರ್ಶಿಯಾಗಿ  ಕೆ ಟಿ ಶಿವಾನಂದನ್ ವೈದ್ಯರು, ಕಾರ್ಯಾಧ್ಯಕ್ಷರಾಗಿ ಸುಧೀರ್ ಶೆಟ್ಟಿ ಎಣ್ಮಕಜೆ,  ಕೆ ಕೆ ನಾರಾಯಣನ್, ಡಾ. ಜಯಪ್ರಕಾಶನಾರಾಯಣ್ ತೊಟ್ಟೆತ್ತೋಡಿ,   ಪಿ.ಮೀರಾ ಆಳ್ವ, ಶಾಜಿ ಎಸ್.ಪಿ.,  ಉಪೇಂದ್ರ ಕೋಟೆಕಣಿ, ಜಯಕೃಷ್ಣನ್ ಮಾಸ್ಟರ್, ಪ್ರಧಾನ ಸಂಚಾಲಕರಾಗಿ ಲಕ್ಷ್ಮೀನಾರಾಯಣ ಪಟ್ಟೇರಿ, ಕರುಣಾಕರನ್ ನೀಲೇಶ್ವರ, ವಿಷ್ಣು ಅಡಿಗ ಉದುಮ,  ಗಣೇಶ ಮಾವಿನಕಟ್ಟೆ, ಸುರೇಶ್‍ಬಾಬು ಕಾನತ್ತೂರು,  ಕೋಶಾಧಿಕಾರಿಯಾಗಿ  ರಾಮಕೃಷ್ಣನ್ ತಳಿಪರಂಬ ಮತ್ತು  ರವೀಶ್ ತಂತ್ರಿ ಕುಂಟಾರು ಸೇರಿದಂತೆ 1001 ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.

ಚತುರ್ವೇದ ಜ್ಞಾನ ಮಹಾಯಜ್ಞದ ಅಂಗವಾಗಿ ದೇವಾಲಯ ವಠಾರದಲ್ಲಿ ನಕ್ಷತ್ರ ವನ ನಿರ್ಮಾಣಕ್ಕಾಗಿ ಸಸಿಗಳ ನೆಡುವ ಕಾರ್ಯಕ್ರಮ ಈಗಾಗಲೇ ಪೂರ್ತಿಗೊಂಡಿದೆ. ತಮಿಳುನಾಡಿನ ಚಿದಂಬರಂ ಶ್ರೀ ನಟರಾಜ ದೇವಸ್ಥಾನದ ಪ್ರಧಾನ ಅರ್ಚಕ ಬ್ರಹ್ಮಶ್ರೀ ಮಹಾದೇವ ದೀಕ್ಷಿತ್ ಅವರ ಮುಖ್ಯ ಪೌರೊಹಿತ್ಯ ವಹಿಸುವರು.  ನಾಲ್ಕು ಯಜ್ಞಶಾಲೆಗಳಲ್ಲಾಗಿ 16 ಸ್ಥಳಗಳಲ್ಲಿ ಹತ್ತು ದಿನಗಳ ಕಾಲ ಯಜ್ಞ ನಡೆಯಲಿದ್ದು, ಐದನೇ ಯಜ್ಞಶಾಲೆಯಲ್ಲಿ ವೇದ ಮಂತ್ರಗಳೊಂದಿಗೆ ಹೋಮಪೂಜಾದಿ ಕಾರ್ಯಗಳು ನೆರವೇರಲಿವೆ. ಯಜ್ಞದ ಅಧ್ಯಯನ ಮತ್ತು ಸಂಶೋಧನೆಗಾಗಿ ದೇಶ ವಿದೇಶಿ ವಿಜ್ಞಾನಿಗಳು, ವಿಶ್ವದ ವಿವಿಧ ದೇಶಗಳಿಂದ ವೈದಿಕ ಪಂಡಿತರು,  ವಿವಿಧ ವಿಶ್ವವಿದ್ಯಾನಿಲಯದಿಂದ ಸಂಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಗಣ್ಯರು ಆಗಮಿಸಲಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries