ಬದಿಯಡ್ಕ: ಪ್ರಣವ್ ಫೌಂಡೇಶನ್ ಹಾಗೂ ಆರ್.ವಿ ಚಾರಿಟೇಬಲ್ ಟ್ರಸ್ಟ್ ಸಹಯೋಗದ ಪುಸ್ತಕ- 2024, ಉಚಿತ ಕಲಿಕಾ ಸಾಮಾಗ್ರಿ ವಿತರಣಾ ಕಾರ್ಯಕ್ರಮವು ಇತ್ತೀಚೆಗೆ ಎಡನೀರಿನ ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿತು. ಶಾಲೆಯ 90 ಕ್ಕೂ ಅಧಿಕ ಮಕ್ಕಳಿಗೆ ಉಚಿತ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿ, ವಿದ್ಯಾ ಸಂಪತ್ತು ಸಕಲ ಐಶ್ವರ್ಯಗಳಿಗೂ ಮೂಲವಾಗಿದ್ದು, ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಅನಾವರಣಗೊಳ್ಳಲು ಅಗತ್ಯವಿದೆ. ಕೊರತೆಗಳನ್ನು ನೀಗಿಸುವಲ್ಲಿ ಸಹೃದಯರ ಬೆಂಬಲದೊಂದಿಗೆ ವಿದ್ಯಾರ್ಥಿಗಳು ಮುನ್ನಡಯಬೇಕು. ನೆರವಿನ ಸಂಪೂರ್ಣ ಉಪಯೋಗ ಪಡೆದು ಬದುಕನ್ನು ಸಾರ್ಥಕಪಡಿಸಬೇಕು ಎಂದು ನುಡಿದು, ಫೌಂಡೇಶನಿನ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ನಿವೃತ್ತ ವಿದ್ಯಾಧಿಕಾರಿ ವೇಣುಗೋಪಾಲ್, ನಿವೃತ್ತ ಪ್ರಾಚಾರ್ಯ ಪ್ರೊ. ಪುರುμÉೂೀತ್ತಮ ಪುಣಿಂಚಿತ್ತಾಯ, ಪ್ರಣವ್ ಫೌಂಡೇಶನ್‍ನ ಟ್ರಸ್ಟಿ ಗುರುರಂಜನ ಪುಣಿಂಚಿತ್ತಾಯ, ವಿಜಯರಾಜ್ ಪಿ ಮುಂತಾದವರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯಿನಿ ಜ್ಯೋತಿಲಕ್ಷ್ಮೀ ಭಟ್ ಸ್ವಾಗತಿಸಿ, ಚಂದ್ರಿಕಾ ಯಸ್. ವಂದಿಸಿದರು, ವೆಂಕಟಕೃಷ್ಣ ಕೆ. ನಿರೂಪಿಸಿದರು.