ಮುಳ್ಳೇರಿಯ: ಮುಳ್ಳೇರಿಯ ಕಯ್ಯಾರ ಕಿಞ್ಞಣ್ಣ ರೈ ವಾಚನಾಲಯ-ಗ್ರಂಥಾಲಯ ಹಾಗೂ ಕಾಸರಗೋಡು ಜಿಲ್ಲಾ ಚಿತ್ರಕಲಾವಿದರ ಸಂಘದ ಸಂಯುಕ್ತ ಆಶ್ರಯದಲ್ಲಿ ವಯನಾಡಿನ ನಿರ್ಗತಿಕರಿಗೆ ಚಿತ್ರದಾರಂ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಘದ ಜಿಲ್ಲಾಧ್ಯಕ್ಷ ಕೆ. ನಾರಾಯಣ ಉದ್ಘಾಟಿಸಿದರು. ಕೆ.ಮಣಿಕಂಠನ್ ಪೆರುಂಬಳ, ಕೆ.ಕೆ.ಮೋಹನನ್, ಜಿ.ಕೆ.ಭಟ್, ಸಾಯನಕುಮಾರ್, ಎ.ಕೆ.ಬಾಲಚಂದ್ರನ್ ಮಾಸ್ತರ್, ಹರೀಶ್ ಮಾತನಾಡಿದರು.