ತಿರುವನಂತಪುರಂ: ಕೇರಳ ಸ್ಟೇಟ್ ಬ್ಲಡ್ ಟ್ರಾನ್ಸ್‍ಫ್ಯೂಶನ್ ಕೌನ್ಸಿಲ್ ಅಧೀನದಲ್ಲಿರುವ ರಕ್ತನಿಧಿ ಕೇಂದ್ರಗಳ ನೌಕರರಿಗೆ 10 ದಿನಗಳೊಳಗೆ ವೇತನ ಪರಿಷ್ಕರಣೆ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ಶ್ರೀಚಿತ್ರ ತಿರುನಾಳ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ನೌಕರರ ಸಂಘ (ಬಿ.ಎಂ.ಎಸ್.ಎಸ್.) ಪ್ರಧಾನ ಕಾರ್ಯದರ್ಶಿ ವಿ. ರಂಜಿತ್ ಕುಮಾರ್ ಅವರು ಕೇಂದ್ರ ಸಚಿವ ಜೆಪಿ ನಡ್ಡಾ ಅವರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.
ಚಾಲಕರಿಂದ ಹಿಡಿದು ಆಡಳಿತಾತ್ಮಕ ಉದ್ಯೋಗಿಗಳವರೆಗೆ 170ಕ್ಕೂ ಹೆಚ್ಚು ಮಂದಿಗೆ ವೇತನ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಏಪ್ರಿಲ್ 1, 2021 ರಿಂದ ಪೂರ್ವಾನ್ವಯವಾಗುವಂತೆ ಜೂನ್ 21, 2024 ರಂದು ವೇತನ ಹೆಚ್ಚಳ ಮಾಡಲಾಗಿದೆ. ಆದರೆ ಕೇರಳ ಮಾತ್ರ ಅದನ್ನು ಜಾರಿಗೆ ತಂದಿರಲಿಲ್ಲ. ಇದರ ಬೆನ್ನಲ್ಲೇ ಬಿಎಂಎಸ್ ಮನವಿ ಸಲ್ಲಿಸಿತ್ತು.
ವೇತನ ಪರಿಷ್ಕರಣೆ ಕುರಿತು 10 ದಿನದೊಳಗೆ ರಾಷ್ಟ್ರೀಯ ರಕ್ತ ವರ್ಗಾವಣೆ ಮಂಡಳಿಗೆ ಮಾಹಿತಿ ನೀಡಬೇಕು ಎಂದೂ ಕೇಂದ್ರ ಸೂಚಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್, ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಇ.ವಿ. ರಂಜಿತ್ ಕುಮಾರ್ ಅವರು ಆನಂದ್ ಅವರಿಗೆ ಕೃತಜ್ಞತೆ ಸಲ್ಲಿಸಿರುವರು.