HEALTH TIPS

ಸಂಸತ್‌ ಭದ್ರತಾ ಲೋಪ: ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ ದೆಹಲಿ ಪೊಲೀಸರು

 ವದೆಹಲಿ (PTI): ಸಂಸತ್ತಿನಲ್ಲಿ ನಡೆದ ಭದ್ರತಾ ಲೋಪ ಪ್ರಕರಣದ ಆರೋಪಿಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ಉಂಟುಮಾಡಲು ಬಯಸಿದ್ದರು ಹಾಗೂ ಅಲ್ಪ ಸಮಯದಲ್ಲೇ ಜಾಗತಿಕವಾಗಿ ಖ್ಯಾತಿ ಪಡೆಯಲು ಪ್ರಯತ್ನಿಸಿದ್ದರು ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ತಿಳಿಸಿದ್ದಾರೆ.

2023ರ ಡಿಸೆಂಬರ್‌ 13ರಂದು ನಡೆದಿದ್ದ ಪ್ರಕರಣದಲ್ಲಿ ಡಿ. ಮನೋರಂಜನ್‌, ಲಲಿತ್‌ ಝಾ, ಅಮೋಲ್‌ ಶಿಂದೆ, ಮಹೇಶ್‌ ಕುಮಾವತ್‌, ಸಾಗರ್‌ ಶರ್ಮಾ ಮತ್ತು ನೀಲಂ ಆಜಾದ್‌ ಅವರು ಆರೋಪಿಗಳಾಗಿದ್ದಾರೆ.

'ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಪರಿಣಾಮಕಾರಿಯಾಗಿಲ್ಲ ಮತ್ತು ಅದನ್ನು ಬದಲಾಯಿಸಬೇಕಾಗಿದೆ' ಎಂಬ ಸಂದೇಶವನ್ನು ರವಾನಿಸಲು ಆರೋಪಿಗಳು ಬಯಸಿದ್ದರು ಎಂದು ಮೂಲಗಳು ಹೇಳಿವೆ.

ಸಾಮಾಜಿಕ ಮಾಧ್ಯಮಗಳ ಮೂಲಕ ಪರಸ್ಪರ ಪರಿಚಯವಾಗಿದ್ದ ಆರೋಪಿಗಳು, ತಮ್ಮ ಸಂಚನ್ನು ಕಾರ್ಯಗತಗೊಳಿಸಲು ಸುಮಾರು ಎರಡು ವರ್ಷ ತಯಾರಿ ನಡೆಸಿದ್ದರು. ಮೊದಲ ಸಭೆಯನ್ನು 2022ರ ಫೆಬ್ರುವರಿಯಲ್ಲಿ ಮೈಸೂರಿನಲ್ಲಿ ನಡೆಸಿದ್ದರು ಎಂಬುದನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೈಸೂರು, ಗುರುಗ್ರಾಮ ಮತ್ತು ದೆಹಲಿಯಲ್ಲಿ ಐದು ಸಭೆಗಳನ್ನು ನಡೆಸಿದ ಬಳಿಕ ಅವರು ಯೋಜನೆಯನ್ನು ಅಂತಿಮಗೊಳಿಸಿದ್ದರು ಎಂದು ಹೇಳಿದೆ. ಆರು ಆರೋಪಿಗಳ ವಿರುದ್ಧ ಪೊಲೀಸರು ಜೂನ್‌ 7ರಂದು ಸುಮಾರು 1000 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದರು. ಜುಲೈನಲ್ಲಿ ಹೆಚ್ಚುವರಿ ಆರೋಪ ಪಟ್ಟಿಯನ್ನೂ ಸಲ್ಲಿಸಿದ್ದರು.

'ಮನೋರಂಜನ್‌ ಅವರು ಎಂಜಿನಿಯರಿಂಗ್‌ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿ 2014ರಲ್ಲಿ ಕಾಂಬೋಡಿಯಾಗೆ ಪ್ರಯಾಣಿಸಿ, ಅಲ್ಲಿ ಎಂಟು ತಿಂಗಳು ತಂಗಿದ್ದರು. ಭಾರತಕ್ಕೆ ಮರಳಿದ ಬಳಿಕ 2015ರಲ್ಲಿ ಬೈಕ್‌ನಲ್ಲಿ ಲಡಾಖ್‌ಗೆ ಪ್ರಯಾಣ ಕೈಗೊಂಡಿದ್ದರು. ಅವರ ಈ ಪ್ರಯಾಣಕ್ಕೆ ಕ್ಯೂಬಾದ ಕ್ರಾಂತಿಕಾರಿ ನಾಯಕ ಚೆಗುವೆರಾ ಬರೆದಿರುವ 'ಮೋಟರ್‌ಸೈಕಲ್ ಡೈರೀಸ್' ಪುಸ್ತಕ ಪ್ರೇರಣೆಯಾಗಿತ್ತು ಎಂಬ ಅಂಶ ಆರೋಪ ಪಟ್ಟಿಯಲ್ಲಿದೆ.

ಲಡಾಖ್‌ ಪ್ರಯಾಣದ ವೇಳೆ ಆ ಸಮಯದಲ್ಲಿ ಹೈದರಾಬಾದ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಚೀನಾದ ವಿದ್ಯಾರ್ಥಿಯೊಬ್ಬ ದೆಹಲಿಯವರೆಗೆ ಮನೋರಂಜನ್‌ ಜತೆ ಸವಾರಿ ಮಾಡಿದ್ದರು. ಮಧ್ಯಪ್ರದೇಶ, ರಾಜಸ್ಥಾನ ಮಾರ್ಗವಾಗಿ ದೆಹಲಿ ತಲುಪಿದ್ದರು ಎಂದು ಹೇಳಿದೆ.

ಸಂಸತ್ ಮೇಲಿನ ದಾಳಿ ಪ್ರಕರಣದ 22ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾಗರ್ ಶರ್ಮಾ ಮತ್ತು ಮನೋರಂಜನ್ ಲೋಕಸಭೆಯ ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದಿದ್ದರು. ಘೋಷಣೆಗಳನ್ನು ಕೂಗುತ್ತಾ 'ಸ್ಮೋಕ್ ಕ್ಯಾನ್' ಹಾರಿಸಿ ದಾಂದಲೆ ಎಬ್ಬಿಸಿದ್ದರು. ಅದೇ ಸಮಯಕ್ಕೆ ಸಂಸತ್ ಭವನದ ಹೊರಗೆ ಅಮೋಲ್ ಶಿಂದೆ ಮತ್ತು ನೀಲಂ ಆಜಾದ್ ಬಣ್ಣದ ಹೊಗೆ ಹಾರಿಸಿ ಘೋಷಣೆ ಕೂಗಿದ್ದರು.

- ‍ಆರೋಪ ಪಟ್ಟಿಯಲ್ಲಿ ಏನಿದೆ?

* ಮೈಸೂರಿನ ಡಿ. ಮನೋರಂಜನ್‌ ಈ ಪ್ರಕರಣದ ಪ್ರಮುಖ ಸಂಚುಕೋರ

* ಆರೋಪಿಗಳು ಮೊದಲ ಸಭೆಯನ್ನು ಮೈಸೂರಿನಲ್ಲಿ ಮನೋರಂಜನ್‌ನ ಗೆಳೆಯನ ಫ್ಲ್ಯಾಟ್‌ನಲ್ಲಿ ನಡೆಸಿದ್ದರು. ಆ ಸಭೆಯಲ್ಲಿ 10 ಮಂದಿ ಪಾಲ್ಗೊಂಡಿದ್ದರು.

* ಸಭೆಯಲ್ಲಿ ಪಾಲ್ಗೊಂಡಿದ್ದವರಿಗೆ ಹಿಂಸಾತ್ಮಕ ಪ್ರತಿಭಟನೆಯ ಕೆಲವು ವಿಡಿಯೊಗಳನ್ನು ತೋರಿಸಿದ್ದ ಮನೋರಂಜನ್‌ ಸಂಘಟನೆಯೊಂದನ್ನು ಹುಟ್ಟುಹಾಕುವ ಬಗ್ಗೆ ಮಾತನಾಡಿದ್ದರು.

* ಎರಡನೇ ಸಭೆಯು 2022ರ ಆಗಸ್ಟ್‌ನಲ್ಲಿ ಗುರುಗ್ರಾಮದಲ್ಲಿ ನಡೆದಿದ್ದು ಏಳು ಮಂದಿ ಭಾಗವಹಿಸಿದ್ದರು. ಮೊದಲ ಸಭೆಯಲ್ಲಿದ್ದವರಲ್ಲಿ ಕೆಲವರು ಈ ತಂಡದ 'ಕಾನೂನುಬಾಹಿರ' ಯೋಜನೆ ಅರಿತಿದ್ದರಿಂದ ಹಿಂದೆ ಸರಿದಿದ್ದರು.

* ತಂಡಕ್ಕೆ ಮಹಿಳೆಯೊಬ್ಬರನ್ನು ಸೇರಿಸಿಕೊಳ್ಳಬೇಕು ಎಂದು ಮನೋರಂಜನ್‌ ಈ ಸಭೆಯಲ್ಲಿ ನಿರ್ಧರಿಸಿದ್ದರು. ಅದರಂತೆ ನೀಲಂ ಅವರನ್ನು ಸೇರಿಸಿಕೊಳ್ಳಲಾಯಿತು.

* ಮೂರನೇ ಸಭೆ ದೆಹಲಿಯ ಪಹಾಢ್‌ಗಂಜ್‌ನಲ್ಲಿ 2023ರ ಆಗಸ್ಟ್‌ನಲ್ಲಿ ನಡೆದಿದ್ದು ಎಲ್ಲ ಆರೂ ಆರೋಪಿಗಳು ಪಾಲ್ಗೊಂಡಿದ್ದರು.

* 2023ರ ಸೆಪ್ಟೆಂಬರ್‌ನಲ್ಲಿ ಇದೇ ತಾಣದಲ್ಲಿ ಮತ್ತೊಂದು ಸಭೆ ನಡೆದಿದೆ. ಸಂಸತ್‌ ಭವನದ ಒಳಗೆ ಪ್ರವೇಶಿಸಲು ಪಾಸ್‌ಗಳನ್ನು ಪಡೆಯುವ ಮತ್ತು 'ಸ್ಮೋಕ್ ಕ್ಯಾನ್' ಬಳಸುವ ಬಗ್ಗೆ ಚರ್ಚಿಸಿದ್ದರು.

* ತಮ್ಮ ಸಂಚನ್ನು ಕಾರ್ಯಗತಗೊಳಿಸುವ ಮುನ್ನ (2023ರ ಡಿಸೆಂಬರ್‌ 13 ರಂದು) ಗುರುಗ್ರಾಮ ಹಾಗೂ ನವದೆಹಲಿಯ ಇಂಡಿಯಾ ಗೇಟ್‌ ಬಳಿ ಕೊನೆಯ ಸಭೆ ನಡೆದಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries