ಬದಿಯಡ್ಕ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯು 2025 ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಜರಗಲಿದ್ದು, ಕಾರ್ಯಕ್ರಮಗಳ ಯಶಸ್ಸಿಗಾಗಿ ಕುಂಬ್ಡಾಜೆ ಗ್ರಾಮಪಂಚಾಯಿತಿ ಮಟ್ಟದ ಸಮಿತಿ ರಚನೆ ಅಗಲ್ಪಾಡಿ ಮಾರ್ಪನಡ್ಕ ಶ್ರೀ ಗೋಪಾಲಕೃಷ್ಣ ಭಜನಾಮಂದಿರದ ಪಾಂಚಜನ್ಯ ಸಾಂಸ್ಕøತಿಕ ಭವನದಲ್ಲಿ ನಡೆಯಿತು.
ಊರಿನ ಹಿರಿಯರಾದ ಹರೀಶ್ ಕುಣಿಕುಳ್ಳಾಯ ನಡುಮನೆ ಪಾರೆಗದ್ದೆ ದೀಪಬೆಳಗಿಸಿ ಸಭೆ ಉದ್ಘಾಟಿಸಿದರು. ಸಾಮಾಜಿಕ ಧಾರ್ಮಿಕ ಮುಂದಾಳು ಎಂ.ಸಂಜೀವ ಶೆಟ್ಟಿ ಮೊಟ್ಟೆಕುಂಜ ಅಧ್ಯಕ್ಷತೆ ವಹಿಸಿದ್ದರು. ಮಧೂರು ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಪ್ರಭಾಶಂಕರ ಮಾಸ್ತರ್ ಹಾಗೂ ವಕೀಲ ಅನಂತರಾಮ್ ಕಾಸರಗೋಡು ಸಮಗ್ರಮಾಹಿತಿ ನೀಡಿದರು. ಬಾಬು ಮಾಸ್ತರ್ ಅಗಲ್ಪಾಡಿ, ಜನಾದರ್Àನ ಮಣಿಯಾಣಿ ಬೆದ್ರುಕೂಡ್ಲು, ಆನಂದ ಕೆ.ಮವ್ವಾರು, ವಸಂತಿ ಟೀಚರ್ ಅಗಲ್ಪಾಡಿ, ಹರೀಶ ಗೋಸಾಡ, ಗಣೇಶ್ ಭಟ್ ಅಳಕ್ಕೆ, ಸುಕುಮಾರ ಕುದ್ರೆಪ್ಪಾಡಿ, ಸಂತೋಷ್ ಕುಮಾರ್ ಮಧೂರು ಉಪಸ್ಥಿತರಿದ್ದರು.
ಕುಂಬ್ಡಾಜೆ ಪಂಚಾಯಿತಿ ಸಮಿತಿ ಅಧ್ಯಕ್ಷರಾಗಿ ಸಂತೋಷ್ ರೈ ಗಾಡಿಗುಡ್ಡೆ, ಪ್ರಧಾನ ಕಾರ್ಯದರ್ಶಿಯಾಗಿ ಸೂರ್ಯ ಮಾಸ್ತರ್ ಮಾಳಿಗೆಮನೆ ಆಯ್ಕೆಯಾದರು. ಗೌರವಾಧ್ಯಕ್ಷರುಗಳು, ಸಂಚಾಲಕರು ಹಾಗೂ ಪದಾಧಿಕಾರಿಗಳಾಗಿ ಸೇರಿದ ಭಗವದ್ಭಕ್ತರನ್ನು ಆರಿಸಲಾಯಿತು. ಲಾವಣ್ಯ ಗಿರೀಶ್ ಪ್ರಾರ್ಥನೆ ಹಾಡಿದರು. ರಾಜೇಶ್ ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ಹರಿನಾರಾಯಣ ಮಾಸ್ತರ್ ಶಿರಂತಡ್ಕ ವಂದಿಸಿದರು. ರಮೇಶ್‍ಕೃಷ್ಣ ಪದ್ಮಾರು ನಿರೂಪಿಸಿದರು.