HEALTH TIPS

ಕನ್ನಡಕ್ಕೆ ಶಿಕ್ಷಕರಷ್ಟೇ ಪೋಷಕರೂ ಮುಖ್ಯ- ವಿಶಾಲಾಕ್ಷ ಪುತ್ರಕಳ



     ಕಾಸರಗೋಡು : 'ವಿವಿಧ ಮನೆಭಾಷೆಯ ಮಕ್ಕಳು ಒಂದೇ ಕಡೆ ಸೇರಿ ಕನ್ನಡ ಮಾಧ್ಯಮವನ್ನು ಸಮೃದ್ಧಗೊಳಿಸಿದ್ದಾರೆ. ಕನ್ನಡ ಶಾಲೆಯ ಉಳಿವಿನಲ್ಲಿ ಕನ್ನಡಿಗ ಪೋಷಕರೂ ಕೂಡಾ ಶಿಕ್ಷಕರಷ್ಟೇ ಜವಾಬ್ದಾರಿ ಹೊಂದಿದ್ದಾರೆ' ಎಂದು ಕಸಾಪ ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಹೇಳಿದರು. 
     ಅವರು ಭಾನುವಾರ ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನ ಗ್ರಂಥಾಲಯದಲ್ಲಿ ನಡೆದ ಕೇರಳ-ಕರ್ನಾಟಕ ಸ್ಪಂದನ ಸಿರಿ ಕೃಷಿ, ಕನ್ನಡ ಶಿಕ್ಷಣ ಮತ್ತು ಸಂಸ್ಕೃತಿ ಸಮ್ಮೇಳನದಲ್ಲಿ, 'ಸರ್ಕಾರಿ ಕನ್ನಡ ಶಾಲೆಗಳ ಉಳಿವಿನಲ್ಲಿ ಶಿಕ್ಷಕರ ಪಾತ್ರ' ಎಂಬ ವಿಷಯದಲ್ಲಿ ವಿಚಾರ ಮಂಡಿಸಿ ಮಾತನಾಡಿದರು. 
     ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಪಿ ಬಿ ಶ್ರೀನಿವಾಸ ರಾವ್ ಮಾತನಾಡಿ, 'ಕನ್ನಡಿಗರ ಮಕ್ಕಳು ಶಿಕ್ಷಣಕ್ಕಾಗಿ ಕನ್ನಡ ಶಾಲೆಗಳಿಗೆ ಸೇರ್ಪಡೆಯಾದರೆ ಮಾತ್ರ ಕನ್ನಡ ಶಾಲೆಗಳನ್ನು ಉಳಿಸಲು ಸಾಧ್ಯ', ಎಂದು ಹೇಳಿದರು. ಸಂವಾದಕರಾಗಿದ್ದ ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಲಲಿತಾಲಕ್ಷ್ಮಿ ಕುಳಮರ್ವ ಮಾತನಾಡಿ,' ಪ್ರತಿಯೊಬ್ಬ ಕನ್ನಡಿಗರಲ್ಲೂ ಮಾತೃಭಾಷೆಯ ಪ್ರೇಮ ಅರಳಬೇಕು. ಸರ್ಕಾರಿ ಕನ್ನಡ ಶಾಲೆಯ ಉಳಿವು ಕನ್ನಡಿಗರ ಕೈಯಲ್ಲಿದೆ' ಎಂದು ಹೇಳಿದರು. ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠದ ಮುಖ್ಯ ಶಿಕ್ಷಕ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಮಾತನಾಡಿ, 'ಕೇವಲ ವೇದಿಕೆಯ ಭಾಷಣದಿಂದ ಕನ್ನಡದ ಉಳಿವು ಕಷ್ಟಸಾಧ್ಯ. ಭಾಷಾಪ್ರೇಮ ಜನಮಾನಸದಲ್ಲಿ ಅರಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಗೆಲುವಿಗೆ ಆದ್ಯತೆ. ನಾವು ವ್ಯವಸ್ಥೆಯೊಳಗೆ ಬಂಧಿಯಾಗದೆ ಭಾಗವಹಿಸುವಿಕೆಯ ಮನಸ್ಥಿತಿ ಬೆಳೆಸಿಕೊಳ್ಳಬೇಕು' ಎಂದು ಹೇಳಿದರು. ಡಾ. ಶಾಲಾ ಕೆ ಎನ್ ಅವರು ಜ್ವಲಂತ ಸಮಸ್ಯೆಯ ಬಗ್ಗೆ ಮಾತನಾಡಿದರು. ಗಿರಿಜ ವಿಜಯನಗರ ಸ್ವಾಗತಿಸಿದರು. ಭಾಗ್ಯಲಕ್ಷ್ಮಿ ವಿಜಯನಗರ ವಂದಿಸಿದರು. ಹಿತೇಶ್ ಕುಮಾರ ನೀರ್ಚಾಲ್ ನಿರೂಪಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries