ತಿರುವನಂತಪುರ: ಪೋಲೀಸ್ ಮತ್ತು ಗೃಹ ಇಲಾಖೆಗಳನ್ನು ಬೊಟ್ಟುಮಾಡಿ ಶಾಸಕ ಪಿವಿ ಅನ್ವರ್ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಡಿಜಿಪಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿದ್ದಾರೆ.
ಡಿಜಿಪಿ ಶೇಖ್ ದರ್ವೇಶ್ ಸಾಹೇಬ್ ಅವರು ಕೊಟ್ಟಾಯಂ ನಡಕÀಂ ಅತಿಥಿ ಗೃಹದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದರು.
ಕೊಟ್ಟಾಯಂನಲ್ಲಿ ನಡೆದ ಪೆÇಲೀಸ್ ಸಂಘದ ರಾಜ್ಯ ಸಮ್ಮೇಳನದ ಸಮಾರೋಪದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಮತ್ತು ಡಿಜಿಪಿ ಇಂದು ಕೊಟ್ಟಾಯಂಗೆ ತಲುಪಿದ್ದರು. ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ಮತ್ತು ಪತ್ತನಂತಿಟ್ಟ ಎಸ್ಪಿ ಸುಜಿತ್ ದಾಸ್ ಅವರನ್ನು ಹೊರತುಪಡಿಸಿ ತನಿಖೆ ಪ್ರಕಟಿಸಬಹುದು ಎಂದು ಸೂಚಿಸಲಾಗಿದೆ. ಇಂತಹ ತನಿಖೆಗೆ ಆಸಕ್ತಿ ಇದೆ ಎಂದು ಸ್ವತಃ ಎಡಿಜಿಪಿ ಅವರೇ ಮುಖ್ಯಮಂತ್ರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಗೃಹ ಇಲಾಖೆ ಹಾಗೂ ಸರ್ಕಾರವನ್ನು ರಕ್ಷಣಾತ್ಮಕತೆಗೆ ದೂಡಿರುವ ಆಡಳಿತ ಪಕ್ಷದ ಶಾಸಕ ಪಿ.ವಿ.ಅನ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಪಿ.ಶಶಿ ಹಾಗೂ ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪೋಲೀಸ್ ಮುಖ್ಯಸ್ಥರಿಂದ ವರದಿ ಕೇಳಿದ್ದಾರೆ. ಈ ಹಿನ್ನೆಲೆಯಲಲಿ ಡಿಜಿಪಿ ಮುಖ್ಯಮಂತ್ರಿಯನ್ನು ಖುದ್ದು ಭೇಟಿ ಮಾಡಿದರು.
ಭಾನುವಾರ, ಎಡಿಜಿಪಿ ವಿರುದ್ಧ ಹೆಚ್ಚಿನ ಆರೋಪಗಳೊಂದಿಗೆ ಅನ್ವರ್ ಮಾಧ್ಯಮಗಳಲ್ಲಿ ಮಾತನಾಡಿರುವರು. ದೇಶವಿರೋಧಿ ಚಟುವಟಿಕೆಗಳ ಬಗ್ಗೆ ಸಮಾಜಕ್ಕೆ ತಿಳಿಸುವ ಸಲುವಾಗಿ ಪೋನ್ ಸಂಭಾಷಣೆಗಳನ್ನು ಸೋರಿಕೆ ಮಾಡಿದ್ದೇನೆ ಮತ್ತು ಇದಕ್ಕಾಗಿ ಕೇರಳ ಸಮಾಜದಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಅವರು ಪ್ರಾರಂಭಿಸಿದರು. ಕಲ್ಲೆಸೆದು ಕೊಲೆಗೈದು ಜೀವ ಬೆದರಿಕೆ ಹಾಕುವವರನ್ನು ಎದುರಿಸುತ್ತಿರುವೆ ಎಂದು ಅನ್ವರ್ ಹೇಳಿದ್ದು, ಎಸ್. ಸುಜಿತದಾಸ್ ಜೊತೆಗಿನ ಹೊಸ ಪೋನ್ ಸಂಭಾಷಣೆ ಬಿಡುಗಡೆಯಾಗಿದೆ.
ಮಲಪ್ಪುರಂ ಎಸ್‍ಪಿಯಾಗಿದ್ದಾಗ ಕ್ಯಾಂಪ್ ಆಫೀಸ್‍ನಿಂದ ಮರಗಳನ್ನು ಕಡಿದ ದೂರನ್ನು ಹಿಂಪಡೆಯುವಂತೆ ಶಾಸಕ ಅನ್ವರ್‍ಗೆ ಮನವಿ ಮಾಡಿದ್ದ ಸುಜಿತ್‍ದಾಸ್ ಅವರ ಪೋನ್ ಸಂಭಾಷಣೆಯನ್ನು ಈ ಹಿಂದೆ ಬಿಡುಗಡೆ ಮಾಡಲಾಗಿತ್ತು.