ಕೊಚ್ಚಿ: ಮಲಯಾಳಂ ಚಿತ್ರರಂಗ ದುಃಖದ ಕಾಲಘಟ್ಟದಲ್ಲಿ ಸಾಗುತ್ತಿದ್ದು, ಪ್ರೀತಿ ಇರುವ ಜನರಿರುವವರೆಗೆ ಮಲಯಾಳಂ ಚಿತ್ರರಂಗಕ್ಕೆ ಏನೂ ಆಗುವುದಿಲ್ಲ ಎಂದು ನಟಿ ಮಂಜು ವಾರಿಯರ್ ಹೇಳಿದ್ದಾರೆ.
ಮೈ-ಜಿ ಶೋರೂಂ ಉದ್ಘಾಟನೆ ಸಂದರ್ಭ ನಡೆದ ಸಮಾರಂಭದಲ್ಲಿಅವರು ಮಾತನಾಡಿದರು. ಈ ಸಂದರ್ಭ ನಟ ಟೊವಿನೋ ಥಾಮಸ್ ಕೂಡ ಉಪಸ್ಥಿತರಿದ್ದರು.
ಇಂದು ನಾನು ಮತ್ತು ಟೋವಿನೋ ಇಲ್ಲಿ ನಿಂತಿರುವುದಕ್ಕೆ ಮಲಯಾಳಂ ಚಿತ್ರರಂಗವೇ ಕಾರಣ ಎಂದ ನಟಿ, ನಿಮ್ಮ ಬೆಂಬಲ ಮತ್ತು ಪ್ರೀತಿ ಇರುವವರೆಗೆ ಮಲಯಾಳಂ ಚಿತ್ರರಂಗಕ್ಕೆ ಏನೂ ಆಗುವುದಿಲ್ಲ ಎಂದಿರುವರು.
ಎಂಬುರಾನ್ ಚಿತ್ರದ ಚಿತ್ರೀಕರಣ ಸರಾಗವಾಗಿ ಸಾಗುತ್ತಿದ್ದು, ಇದೇ ಬರುವ 16ರಿಂದ ತಾನೂ ಕೂಡ ಚಿತ್ರದ ಭಾಗವಾಗಲಿದ್ದೇನೆ ಎಂದು ಮಂಜು ವಾರಿಯರ್ ಹೇಳಿದ್ದಾರೆ.
ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತು ಅಧ್ಯಯನ ನಡೆಸಿ ಹೇಮಾ ಸಮಿತಿಯ ತನಿಖಾ ವರದಿ ಹೊರಬಿದ್ದ ಬಳಿಕ ಇತ್ತೀಚೆಗೆ ಹಲವು ಆರೋಪಗಳು ಹೊರ ಬರುತ್ತಿವೆ.