ಕಾಸರಗೋಡು : ಜಿಲ್ಲಾ ಸಾಕ್ಷರತಾ ಮಿಷನ್‍ನ ಆಶ್ರಯದಲ್ಲಿ ವಿಶ್ವ ಸಾಕ್ಷರತಾ ದಿನಾಚರಣೆ ಅಂಗವಾಗಿ ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ಶಾಸಕ ಎನ್.ಎ ನೆಲ್ಲಿಕುನ್ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ, ವಕೀಲೆ ಎಸ್.ಎನ್.ಸರಿತಾ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಆರಂಭಿಕ ಸಾಕ್ಷರತಾ ಕಾರ್ಯಕರ್ತರು ಹಾಗೂ ಹಿರಿಯ ಕಲಿಕಾದಾರರು, ಸಮಾನಾಂತರ ಪರೀಕ್ಷೆಗಳಲ್ಲಿ ಉನ್ನತ ಸಾಧಕರಾದ ಶಿಕ್ಷಕರು ಪ್ರೇರಕರನ್ನು ಸಾಕ್ಷರತಾ ದಿನಾಚರಣೆಯಲ್ಲಿ ಗೌರವಿಸಲಾಯಿತು. ಈ ಸಂದರ್ಭ ವಿಪತ್ತು ನಿರ್ವಹಣೆ ಕುರಿತು ತರಗತಿ, ಸಾಕ್ಷರತಾ ಸಂದೇಶ, ಸಾಕ್ಷರತಾ ಪ್ರತಿಜ್ಞೆ ಕೈಗೊಳ್ಳಲಾಯಿತು. ಕಲಾ ಕಾರ್ಯಕ್ರಮಗಳೂ ನಡೆದವು.
ಸಾಕ್ಷರತಾ ಮಿಷನ್ ಮಾನಿಟರಿಂಗ್ ಸಂಯೋಜಕ ಶಾಜುಜೋನ್ ಜಿಲ್ಲಾ ಸಂಯೋಜಕ ಪಿ.ಎನ್.ಬಾಬು, ಹಿರಿಯ ಸಾಕ್ಷರತಾ ಕಾರ್ಯಕರ್ತ ಪಪ್ಪನ್ ಕುಟ್ಟಮತ್, ಕೆವಿ ರಾಘವನ್ ಮಾಸ್ಟರ್, ಕೆ ವಿ ವಿಜಯನ್ ಮಾಸ್ಟರ್, ಮಾಯಿಲ್‍ಪಾಡಿ ರಾಘವನ್ ಮಾಸ್ಟರ್, ಸಿಪಿವಿ ವಿನೋದ್ ಕುಮಾರ್ ಮತ್ತು ಕೌನ್ಸಿಲರ್ ಅಫೀಲಾ ಬಶೀರ್, ಕೈಟ್ ಜಿಲ್ಲಾ ಸಂಯೋಜಕ ರೋಜಿ ಜೋಸೆಫ್, ಸತೀಶನ್ ಬೇವಿಂಜ, ಎಂ ಉಮೇಶನ್, ಕೆ ರಾಧಾಕೃಷ್ಣನ್, ಎಂ ಶಮೀರ್, ಸಿ ಕೆ ಪುಷ್ಪ ಕುಮಾರಿ, ಕೆ ಪಿ ಪುಷ್ಪಲತಾ ಮೊದಲಾದವರು ಉಪಸ್ಥಿತರಿದ್ದರು.