HEALTH TIPS

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ : ಅರ್ಜಿ ಆಹ್ವಾನ

ಕಾಸರಗೋಡು: ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾಸಂಘ ಕಾಸರಗೋಡು ಇವರು ಪ್ರತೀ ವರ್ಷದಂತೆ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆರ್ಥಿಕ ಸಹಾಯ ಮತ್ತು ಅಭಿನಂದನೆಗಳಿಗಾಗಿ ಸಮಾಜದ ಸದಸ್ಯರ ಮಕ್ಕಳಿಂದ ಅರ್ಜಿಯನ್ನು ಆಹ್ವಾನಿಲಾಗಿದೆ. ಎಸ್‍ಎಸ್‍ಎಲ್‍ಸಿ ಮತ್ತು ಪ್ಲಸ್ ಟು/ಪಿಯುಸಿಯಲ್ಲಿ 2023-24ನೇ ವರ್ಷದಲ್ಲಿ ತೆರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು, ಎಂಜಿನಿಯರಿಂಗ್, ಪೋಲಿಟೆಕ್ನಿಕಲ್, ಮೆಡಿಕಲ್, ಡಿ.ಎಡ್/ಬಿ.ಎಡ್‍ನಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ಒಬ್ಬೊಬ್ಬ ವಿದ್ಯಾರ್ಥಿಗೆ ಆರ್ಥಿಕ ಸಹಾಯವನ್ನು ನೀಡಲಾಗುವುದು. (ಹೆತ್ತವರ/ರಕ್ಷಕರ ಆದಾಯ ಪ್ರಮಾಣದ ಪ್ರತಿಯನ್ನು ಲಗತ್ತಿಸಬೇಕು.) ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಾಶಸ್ತ್ಯ ನೀಡಲಾಗುವುದು.

ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು. ಅರ್ಜಿ ನಮೂನೆಯನ್ನು ಉಪಸಂಘದ ಕಾರ್ಯದರ್ಶಿ ಅಥವಾ ಜಿಲ್ಲಾ ಸಂಘದ ಕಾರ್ಯದರ್ಶಿಯವರಿಂದ ಪಡೆದು 15-10-2024 ರ ಮೊದಲು ಉಪಸಂಘ ಅಥವಾ ಜಿಲ್ಲಾ ಸಂಘದ ಕಾರ್ಯದರ್ಶಿಯವರಿಗೆ ತಲುಪಿಸಬೇಕು. ನಂತರ ಬಂದ ಆರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. 

ಪ್ರತಿಯೊಬ್ಬರಿಗೂ ಪುರಸ್ಕಾರ  ಕೊಡುವ ತಾರೀಕು, ಸ್ಥಳ, ಸಮಯವನ್ನು ಮುಂಚಿತವಾಗಿ ಜಿಲ್ಲಾ ಸಂಘದಿಂದ ತಿಳಿಸಲಾಗುವುದು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries