ಕಾಸರಗೋಡು: ಕೂಡ್ಲು ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ನಿನ್ನೆ ಅಪರಾಹ್ನ ಜಿರ್ನೋದ್ಧಾರ ಸಮಿತಿ ಹಾಗೂ ಊರಿನ ಭಕ್ತ ಜನರ ಸಭೆ ನಡೆಯಿತು.
ನವರಾತ್ರಿ ಮಹೋತ್ಸವದ ಬಳಿಕ ಶ್ರೀ ಕ್ಷೇತ್ರದ ಜಿರ್ನೋದ್ಧಾರ ಕೆಲಸ ಕಾರ್ಯಗಳನ್ನು ಪ್ರಾರಂಭಿಸುವ ಸಲುವಾಗಿ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠೆಗೊಳಿಸುವ ಹಾಗೂ ಶಿಲಾನ್ಯಾಸದ ಬಗ್ಗೆ ಈ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್ ರಾಜ್ ಕಾಳ್ಯಂಗಾಡ್ ವಹಿಸಿದ್ದರು, ಗೌರವ ಅಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಆಡಳಿತ ಮೊಕ್ತೇಸರ ಅಚ್ಚುತ ಕಾಳ್ಯಂಗಾಡ್, ರಾಧಾ, ಶೋಭನ, ನಾರಾಯಣ ಪೂಜಾರಿ, ಲವ ಮೀಪುಗುರಿ, ಗೋವಿಂದs ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಹರೀಶ್ ಕೆ ಆರ್ ಸ್ವಾಗತಿಸಿ, ಖಜಾಂಚಿ ಶಾಂತಕುಮಾರ್ ವಂದಿಸಿದರು.